36.1 C
ಪುತ್ತೂರು, ಬೆಳ್ತಂಗಡಿ
January 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಸ.ಉ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ

ಬಳಂಜ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಳಂಜದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮವು ಜ. 11ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರತ್ನಾಕರ್ ಪೂಜಾರಿ ನೆರವೇರಿಸಿದರು. ಶಾಲಾ ಮಕ್ಕಳು ಬೀದಿ ವ್ಯಾಪಾರ, ದಿನಸಿ ಅಂಗಡಿ ಮತ್ತು ಶಾಪಿಂಗ್ ಮಾಲ್ ಎಂಬ ಮೂರು ವಿಧದ ವ್ಯಾಪಾರಗಳನ್ನು ನಡೆಸಿದರು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ದೈಹಿಕ ಶಿಕ್ಷಣ
ಪದಾಧಿಕಾರಿ ಶ್ರೀಮತಿ ಸುಜಯ , ಶಿಕ್ಷಣ ಸಂಯೋಜಕಿ ಶ್ರೀಮತಿ ಚೇತನಾಕ್ಷಿ ಹಾಗೂ ಪೆರೋಡಿತ್ತಾಯಕಟ್ಟೆ ಕ್ಲಸ್ಟರ್ ಸಿ.ಆರ್.ಪಿ ಕಿರಣ್ ಕುಮಾರ್ ಕೆ ಎಸ್ ಉಪಸ್ಥಿತರಿದ್ದು, ಮಕ್ಕಳಿಗೆ ಶುಭ ಹಾರೈಸಿದರು .

ವಿದ್ಯಾರ್ಥಿನಿ ಅನುಶ್ರೀ 6ನೇ ತರಗತಿ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ.ಆರ್. ಧನ್ಯವಾದವಿತ್ತರು. ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Related posts

ಮಚ್ಚಿನ: ಮುಡಿಪಿರೆ ರಸ್ತೆ ದುರಸ್ತಿ

Suddi Udaya

ಉಜಿರೆ ಅಮೃತ್‌ ಸಿಲ್ಕ್ ನಲ್ಲಿ ಮನ್ಸೂನ್ (ಆಷಾಢ) ಸೇಲ್ಸ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ಡಿಸ್ಕೌಂಟ್

Suddi Udaya

ಬೆಳ್ತಂಗಡಿ ಸರ್ಕಲ್ ಇನ್ಸ್‌ ಪೆಕ್ಟರ್ ಆಗಿ ನಾಗೇಶ್ ಕದ್ರಿ ಮರು ನೇಮಕ

Suddi Udaya

ಬೆಳ್ತಂಗಡಿ: ದ.ಕ. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಮಹಾಸಭೆ

Suddi Udaya

ಕಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ ಅಳವಡಿಸಿದ ಸೋಲಾರ್ ಲೈಟ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಡಿ.25-26: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ

Suddi Udaya
error: Content is protected !!