January 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ: ಎಸ್. ಡಿ. ಎಂ ಆಂ.ಮಾ. ಶಾಲೆ ರಾಜ್ಯ ಪಠ್ಯಕ್ರಮದ, ವಿದ್ಯಾರ್ಥಿಗಳಾದ ಅಧಿಶ್ ಬಿ. ಸಿ ಮತ್ತು ಸಚಿತ್ ಭಟ್ ಅತ್ಯುತ್ತಮ ಸಂಶೋಧನೆ ಯ ಹೆಗ್ಗಳಿಕೆ

ಉಜಿರೆ : ಮಧ್ಯಪ್ರದೇಶದ ಭೂಪಾಲ್ ನ ರವೀಂದ್ರ ಭವನದಲ್ಲಿ ಜ. 3 ರಿಂದ 6 ರವರೆಗೆ ನಡೆದಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ)ದ, ವಿದ್ಯಾರ್ಥಿಯಾದ 10ನೇ ತರಗತಿಯ ಅಧಿಶ್ ಬಿ. ಸಿ.ಹಿರಿಯ ವಿಭಾಗದಲ್ಲಿ ಭಾಗವಹಿಸಿ ” ವ್ಯಾಲ್ಯೂ ಎಡಿಶನ್ ಫಾರ್ ಅಗ್ರಿಕಲ್ಚರ್ ವೇಸ್ಟ್ ಅಂಡ್ ವೀಡ್ಸ್ ” ಎಂಬ ವಿಜ್ಞಾನದ ಸಂಶೋಧನೆಯನ್ನು ಮಂಡಿಸಿದ್ದಾರೆ.


ಕಿರಿಯ ವಿಭಾಗದಲ್ಲಿ 9ನೇ ತರಗತಿಯ ಸಚಿತ್ ಭಟ್ ಭಾಗವಹಿಸಿ ” ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್ ಫ್ರಮ್ ಅನ್ಯೂಸ್ಡ್ ಬನಾನಾ ಫೈಬರ್ಸ್” ಎಂಬ ಸಂಶೋಧನೆಯನ್ನು ಮಂಡಿಸಿರುತ್ತಾರೆ. ಈ ಎರಡು ವಿದ್ಯಾರ್ಥಿಗಳು ಸಂಶೋಧನೆಯು ಅತ್ಯುತ್ತಮ ಸಂಶೋಧನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳಾದ 10ನೇ ತರಗತಿಯ ಆಲಾಪ್ ಎಂ ಮತ್ತು 9ನೇ ತರಗತಿಯ ಸುಜನ್ ಗೌಡ ರೊಂದಿಗೆ ಜೊತೆಯಾಗಿ ಸಂಶೋಧನೆಯನ್ನು ನಡೆಸಿರುತ್ತಾರೆ.


ಈ ಸಂಶೋಧನೆಗಳಿಗೆ ಮಾರ್ಗದರ್ಶಿ ಶಿಕ್ಷಕರಾಗಿ ಶ್ರೀಮತಿ ಧನ್ಯವತಿ.ಕೆ ಮತ್ತು ಶ್ರೀಮತಿ ಶೋಭಾ.ಎಸ್ ಕಾರ್ಯನಿರ್ವಹಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರ ಪ್ರಶಂಸೆಗೆ ಪಾತ್ರರಾದ್ದಾರೆ.

Related posts

ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದೊಂದಿಗೆ ಭಾರತೀಯ ಜೀವ ವಿಮಾ ನಿಗಮದಿಂದ 333 ವಿಮಾ ಗ್ರಾಮಗಳ ಘೋಷಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬ-2023

Suddi Udaya

ಹೊಸಂಗಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ನನ್ನ ಗಿಡ ನನ್ನ ಮರ’ ಮತ್ತು ‘ನನ್ನ ನೆಲ ನನ್ನ ಜಲ’ ವಿನೂತನ ಸಪ್ತಾಹ

Suddi Udaya

ನಾವೂರು ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಇಂದಬೆಟ್ಟು: ಬರೆಮೇಲು ನಿವಾಸಿ ಯಶೋಧ ಯಾನೆ ಮೋನಮ್ಮ ನಿಧನ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya
error: Content is protected !!