20.7 C
ಪುತ್ತೂರು, ಬೆಳ್ತಂಗಡಿ
January 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹೇಮಾವತಿ ವೀ. ಹೆಗ್ಗಡೆಯವರ ಕನಸನ್ನು ಸಾಕಾರಗೊಳಿಸಿದ ರಂಗಶಿವ ತಂಡ ‘ಮುದ್ದಣನ ಮನೋರಮೆ’ ನಾಟಕ

ಮುದ್ದಣ ಕವಿ ಪೌರಾಣಿಕ ಕಥಾನಕಗಳನ್ನು ಭಾವನಾತ್ಮಕ ದೃಷ್ಟಿಯಿಂದ ನೋಡಿ ನಾಟಕಗಳನ್ನು ಮತ್ತು ಯಕ್ಷಗಾನಗಳನ್ನು ರಚಿಸಿದವರು. ಅವರು ಬದುಕಿದ್ದು ಕೇವಲ 31 ವರ್ಷಗಳಾದರೂ ಅವರು ಬಿಟ್ಟುಹೋದ ಸಾಹಿತ್ಯ ಸಂಪತ್ತು ಅವರನ್ನು ಅಮರರನ್ನಾಗಿಸಿತು. ಇಂತಹ ವ್ಯಕ್ತಿಯೋರ್ವರ ದಾಂಪತ್ಯ ಜೀವನವನ್ನು ಮುಂದಿಟ್ಟುಕೊAಡು ರಚಿಸಲಾದ ಕಲಾಕೃತಿ ‘ಮುದ್ದಣನ ಮನೋರಮೆ’. ಇದು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರ ನಿಡುಗಾಲದ ಯೋಜನೆ. ಇಂತಹದ್ದೊಂದು ಕೃತಿಯ ಕನಸು ಅವರ ತಲೆಹೊಕ್ಕ 2ವರ್ಷದ ಬಳಿಕ ಉಜಿರೆಯ ವನರಂಗ ಬಯಲು ರಂಗಭೂಮಿಯಲ್ಲಿ ನನಸಾಗಿ ನಾಟಕವು ದೃಶ್ಯ ರೂಪಕವಾಗಿ ಮೈದಳೆಯಿತು.


ನಾಟಕ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಛಾಪು ಮೂಡಿಸಿರುವ ಹೇಮಾವತಿ ಹೆಗ್ಗಡೆಯವರ ಕಲಾತಂಡ ‘ರಂಗಶಿವ’ ಮುದ್ದಣ ನಾಟಕವನ್ನು ಯಶಸ್ವಿಯಾಗಿ ಸಾದರಪಡಿಸಿತು. ರಂಗಶಿವದ ದಶಮಾನೋತ್ಸವ ವರ್ಷದ ‘ಮುದ್ದಣನ ಮನೋರಮೆ’ ನಾಟಕ ಗಂಭೀರ ಮತ್ತು ಆಂತರ್ಯವನ್ನು ಕೆದಕುವ ಪ್ರಯೋಗ. ಎಲ್ಲಿ ಎಡವಟ್ಟಾದರೂ ಕಿರಿಕಿರಿ ಎನಿಸಬಹುದು. ಹೀಗಿದ್ದರೂ ಒಟ್ಟಂದದಲ್ಲಿ ಮುದ್ದಣ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರಿಂದ ಸ್ಪಂದನೆ ಪಡೆಯುವಲ್ಲಿ ಸಫಲವಾಯಿತು. ಹೇಮಾವತಿ ವೀ.ಹೆಗ್ಗಡೆಯವರ ಮಹಿಳಾಪರ ಚಿಂತನೆಗಳು ಮತ್ತೊಮ್ಮೆ ಈ ನಾಟಕದಲ್ಲಿಯೂ ವ್ಯಕ್ತಗೊಂಡವು. ಒಟ್ಟಾರೆಯಾಗಿ ಮುದ್ದಣನ ಕಣ್ಣುಗಳಿಂದ ಕಂಡ ರಾಮಾಶ್ವಮೇಧ ನಾಟಕ, ಹೊಸರಂಗ ಪ್ರಯೋಗದ ಸಾಧ್ಯತೆಗಳನ್ನು ಸಮರ್ಥವಾಗಿ ಸಭಿಕರ ಮುಂದೆ ತಂದು ನಿಲ್ಲಿಸಿದ್ದು ಮಾತ್ರವಲ್ಲದೆ ಪ್ರೇಕ್ಷಕರ ಒಪ್ಪುಗೆಯನ್ನೂ ಪಡೆದುಕೊಂಡಿತು.

Related posts

ಗೋವಿಂದೂರು ರಾಜ್ಯ ಹೆದ್ದಾರಿಯಲ್ಲಿ ಜೀವ ಬಲಿ ಪಡೆಯಲು ಕಾಯುತ್ತಿದೆ ರಸ್ತೆ ಗುಂಡಿಗಳ ಸಾಲು

Suddi Udaya

ಜಮಲಾಬಾದ್ ಇದ್ಗದಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಬೆಳ್ತಂಗಡಿ : ಎಸ್.ಡಿ.ಪಿ.ಐ ಪಕ್ಷ ಸಮಾವೇಶ

Suddi Udaya

ಕಳೆಂಜ: ಸ.ನಂ 309 ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ.ಎ ನೇತೃತ್ವದಲ್ಲಿ ವಿ.ಪ. ಸದಸ್ಯ ಐವನ್ ಡಿಸೋಜ ರವರಿಗೆ ಮನವಿ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಸಿಎಎ ಕಾಯಿದೆ ಅನುಷ್ಠಾನ: ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Suddi Udaya
error: Content is protected !!