ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಗಲೀಕರಣ ಪ್ರಯುಕ್ತ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮೇಲಂತಬೆಟ್ಟು, ವಾಣಿ ಶಾಲೆ, ಚರ್ಚ್ ರಸ್ತೆ, ಕಲ್ಲಗುಡ್ಡೆ, ಚೌಕದಬೆಟ್ಟು, ಹುಣ್ಸೆಕಟ್ಟೆ, ರೆಂಕೆದಗುತ್ತು, ಶಾಂತಿನಗರ, ಪುದ್ದೊಟ್ಟು, ಮುಗುಳಿ ಪರಿಸರದಲ್ಲಿ ಹಾಗೂ
ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11ಕೆವಿ ಬಳ್ಳಮಂಜ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಕಾರಂದೂರು ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕರಾಯ 110ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕುದ್ರಡ್ಕ ಫೀಡರಿನ ತಣ್ಣೀರುಪಂತ ಗ್ರಾಮದ ಬಂಗಳಾಯಿ, ಪುರುಷರ ಮಜಲು, ಅಳಿಕೆ ಹಾಗೂ ಬಸದಿ ಪರಿಸರದಲ್ಲಿ ಜ.16 ರಂದು ಬೆಳಿಗ್ಗೆ 9:30ರಿಂದ ಸಂಜೆ 5:30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.