September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಗ್ರಾಮ ಪಂಚಾಯತ್ ಪ್ರಥಮ ಸುತ್ತಿನ ಗ್ರಾಮಸಭೆ

ವೇಣೂರು: ವೇಣೂರು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಆ. 2 ರಂದು ವೇಣೂರು ಗ್ರಾಮ ಪಂಚಾಯತ್ ಹೊಸ ಬಸ್ಸು ತಂಗುದಾಣ ಸಭಾಂಗಣದಲ್ಲಿ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆರವರ ಅಧ್ಯಕ್ಷತೆಯಲ್ಲಿ ಜರಗಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸಭೆಯನ್ನು ಮುನ್ನಡೆಸಿದರು.

ವೇಣೂರು ಗ್ರಾಮ ಪಂಚಾಯತ್ ಬಜಿರೆ, ವೇಣೂರು, ಮೂಡುಕೋಡಿ ಮತ್ತು ಕರಿಮಣೇಲು ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿ ಆಗಿದ್ದು ತಾಲೂಕಿನ ಹೋಬಳಿ ಮಟ್ಟದಲ್ಲಿದೆ. ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನು ಈ ನಾಲ್ಕು ಗ್ರಾಮಗಳಿಗೆ ಹಂಚಿಕೆ ಮಾಡಿದ್ರೂ ಸಾಕಾಗುವುದಿಲ್ಲ, ಗ್ರಾಮಗಳ ಅಭಿವೃದ್ಧಿಗೆ ಅನುದಾನದ ತೊಡಕಿನಿಂದಾಗಿ ತೊಂದರೆಯಾಗುತ್ತಿದೆ. ಮೂಡಕೋಡಿಯನ್ನು ಗ್ರಾಮ ಪಂಚಾಯತ್ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದಾಗ ಇದಕ್ಕೆ ಪರ ವಿರೋಧ ಚರ್ಚೆ ನಡೆದು ನಾಲ್ಕು ಗ್ರಾಮಗಳ ಪೈಕಿ ಎರಡು ಗ್ರಾಮಗಳನ್ನು ಒಳಗೊಂಡ ನೂತನ ಗ್ರಾಮ ಪಂಚಾಯತ್ ಮಾಡಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ಬಹುಮತದಿಂದ ಒತ್ತಾಯಿಸಿದರು. ಈ ಕುರಿತು ನಿರ್ಣಯಿಸಲಾಯಿತು.

ಗ್ರಾಮ ಸಭೆಯಲ್ಲಿ ಉಪಾಧ್ಯಕ್ಷ ಉಮೇಶ್ ಎನ್ ನಡ್ತಿಕಲ್ಲು,ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಟೀಲ್ ವರದಿ ಮಂಡಿಸಿದರು. ಕಾರ್ಯದರ್ಶಿ ವನಜಾ ಸ್ವಾಗತಿಸಿದರು.ಸಿಬ್ಬಂದಿಗಳು ಸಹಕರಿಸಿದರು.

Related posts

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಅಮೂಲ್ಯ ವಜ್ರಗಳ ಹಬ್ಬಕ್ಕೆ ಚಾಲನೆ: ಗ್ರಾಹಕರ ಕೈಗೆಟಕುವ ರೀತಿಯಲ್ಲಿ ‘ಡೈಮಂಡ್ ಫೆಸ್ಟ್’

Suddi Udaya

ಪುಂಜಾಲಕಟ್ಟೆ: ಪಿಲಾತಬೆಟ್ಟು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ ತುಂಗಪ್ಪ ಬಂಗೇರ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Suddi Udaya

ಆಳ್ವಾಸ್ ‘ಪುನರ್ಜನ್ಮ’ ಕೇಂದ್ರದ 6ನೇ ವಾರ್ಷಿಕೋತ್ಸವ

Suddi Udaya

ಪಣಕಜೆ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!