ಕಡಿರುದ್ಯಾವರ: ಶ್ರೀ ರಾಮಾಂಜನೇಯ ದೇವಸ್ಥಾನ ಕಾನರ್ಪದಲ್ಲಿ 49ನೇ ವರ್ಷದ ಮಕರ ಸಂಕ್ರಮಣದ ಶ್ರೀ ರಾಮಾಂಜನೇಯ ದೇವರ ಪೂಜೆ, ಸತ್ಯನಾರಾಯಣ ಪೂಜೆ ಹಾಗೂ ದಿI ಎಂ. ಸಂಜೀವ ಮಾಸ್ಟರ್ ಕುರುಡ್ಯ ಸಂಸ್ಮರಣೆಯಲ್ಲಿ ಭಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ಜ.14ರಂದು ವಿಕ್ರಮ ಹೊಳ್ಳ ನೇತೃತ್ವದಲ್ಲಿ ನಡೆಯಿತು.
ಭಜನಾ ಕಾರ್ಯಕ್ರಮವನ್ನು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಂ. ಎಸ್. ವರ್ಮ ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾIಅಕ್ಷತಾ ಕೆ. ಧಾರ್ಮಿಕ ಪ್ರವರ್ಚನ ನೀಡಿದರು.
ವೇದಿಕೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಚಿರಂಜೀವಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ, ದಿವ್ಯಾ ರಾಮಚಂದ್ರ ಭಟ್ ಅರೆಕ್ಕಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಕ್ಷೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಬಂಗಾಡಿ ಸಿ.ಎ ಬ್ಯಾಂಕ್ ನ ಅಧ್ಯಕ್ಷ ಹರೀಶ್ ಕುಮಾರ್ ನಾವೂರು, ಉಪಾಧ್ಯಕ್ಷ ಆನಂದ ಗೌಡ ಬರೆಮೇಲು, ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಗಣೇಶ್ ಗೌಡ, ಶಾರದನಗರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕೊಕ್ಕಡ ಸ್ವಾಮಿ ಪ್ರಸಾದ್ ಕನ್ಷ್ಟ್ರಕ್ಷನ್ ನ ಮಾಲಕರಾದ ನಾಗೇಶ್ ಗೌಡ ಕೊಕ್ಕಡ, ನಾರಾಯಣ ಗೌಡ ಪಂಚಶ್ರೀ ಮುಂಡಾಜೆ, ರಾಮಣ್ಣ ಶೆಟ್ಟಿ ಅಗರಿ, ಲೋಕೇಶ್ವರಿ ವಿನಯಚಂದ್ರ ಗೌಡ ವಳಂಬ್ರ, ಬಾಬು ಪೂಜಾರಿ ಕೂಳೂರು, ಚೆನ್ನಕೇಶವ ನಾಯ್ಕ ಮುಂಡಾಜೆ, ಅರಣ್ಯ ಉಪವಲಯಾಧಿಕಾರಿ ಹರಿಪ್ರಸಾದ್ ಕಾನರ್ಪ, ಕಲಾವಿದ ಜಯರಾಮ್ ಕಲಾಕುಂಚ ಮುಂಡಾಜೆ ಹಾಗೂ ಕಡಿರುದ್ಯಾವರ ಮತ್ತು ಮುಂಡಾಜೆ ಗ್ರಾಮದ ಹೆಚ್ಚಿನ ಭಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ರಾಮಾಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಿಶೋರ್ ಕುಮಾರ್ ಸ್ವಾಗತಿಸಿ, ನಾರಾಯಣ ಪೂಜಾರಿ ದೂಂಬೆಟ್ಟು ಧನ್ಯವಾದವಿತ್ತರು.