ಶಿರ್ಲಾಲು: ಶಿರ್ಲಾಲು ಗ್ರಾಮದ ಕೆಮ್ಮಡೆ ಮನೆಯ ಶ್ರೀಮತಿ ವಾರಿಜ (65 ವರ್ಷ) ಅವರು ಜ.14 ರಂದು ನಿಧನರಾದರು.
ಸಂಜೆಯ ಸಮಯದಲ್ಲಿ ಮನೆಯಲ್ಲಿ ತೀವ್ರ ಪ್ರಮಾಣದ ತಲೆನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.ಇವರು ಮೃದು ಹಾಗೂ ಸಾಧು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ಪತಿ ಸೋಮಪ್ಪ ಪೂಜಾರಿ, ಮೂವರು ಪುತ್ರಿಯರಾದ ವಿದ್ಯಾ,ವಿನಯ,ವಿನುತಾ, ಇಬ್ಬರು ಪುತ್ರರಾದ ವಿವೇಕ್,ವಿಜೇತ್ ಹಾಗೂ ಸಹೋದರರು, ಸಹೋದರಿಯರು,ಸೊಸಯಂದಿರು,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಅಪರಾ ಪ್ರಮಾಣದ ಕುಟುಂಬ ವರ್ಗದವರನ್ನು ಅಗಲಿದ್ದಾರೆ.