ಬೆಳ್ತಂಗಡಿ: ನವೀನತೆ ಹಾಗೂ ಪರಿಶುದ್ಧತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜುವೆಲ್ಸ್‌ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಜ.31ರವರೆಗೆ ಕರಿಮಣಿ ಮತ್ತು ಬಳೆಗಳ ಉತ್ಸವ ನಡೆಯಲಿದೆ.
ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯ 15 ದಿನಗಳ ಕಾಲ ಕರಿಮಣಿ ಹಾಗೂ ಬಳೆಗಳ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. 2ಗ್ರಾಂ ನಿಂದ ೧೦೦ಗ್ರಾಂ ವರೆಗಿನ ಕರಿಮಣಿ ಸರಗಳು ಲಭ್ಯವಿದೆ. ಸಾವಿರಕ್ಕೂ ಅಧಿಕ ವಿನ್ಯಾಸದ ಮಾಂಗಲ್ಯ ಸರದ ಸಂಗ್ರಹವಿದೆ. ದೀರ್ಘಕಾಲ ಬಾಳಿಕೆಯ ಗಟ್ಟಿಯಾದ ನಿತ್ಯ ಉಪಯೋಗಿ ಸಣ್ಣ ಕರಿಮಣಿಗಳು ಮುಳಿಯದ ವಿಶೇಷತೆಯಾಗಿದೆ. ಮಹಿಳೆಯರ ಮನಸೂರೆಗೊಳಿಸುವ ರೀತಿಯಲ್ಲಿ ಚಿನ್ನಾಭರಣದ ಸಂಗ್ರಹ ಹೊಂದಿರುವ ಮುಳಿಯದಲ್ಲಿ ೫೦ಕ್ಕೂ ಅಧಿಕ ಹೊಸ ವಿನ್ಯಾಸದ ಬಳೆಗಳ ಸಂಗ್ರವಿದೆ.
ದಿನನಿತ್ಯ ಬಳಕೆಯ ಮತ್ತು ಅಪರೂಪದ ವಿನ್ಯಾಸಗಳ ಬಳೆಗಳ ಪ್ರದರ್ಶನ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಉತ್ಸವದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಚಿನ್ನಾಭರಣದ ಮಳಿಗೆ ಜನರು ಬಂದುಹೋಗುವುದಕ್ಕೆ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಪ್ರದರ್ಶನ ಮತ್ತು ಮಾರಾಟ ಕಲ್ಪನೆಯನ್ನು ಪರಿಚಯಿಸಿದ ಮುಳಿಯ 25 ವರ್ಷಗಳ ಹಿಂದೆ ವಿವಿಧ ರೀತಿಯ ಉತ್ಸವಗಳನ್ನು ಪ್ರಾರಂಭಿಸಿದೆ.
ವಿವಿಧ ಬಗೆಯ ಕಂಠಿ: ಮುಷ್ಟಿ ಕಂಠಿ, ಮುಷ್ಟಿ ಪಿರಿ ಕಂಠಿ, ಗಾಂಚು ಕಂಠಿ, ಗಾಂಚು ಪಿರಿ ಕಂಠಿ, ಕೆ. ಕೆ. ಜಿ. ಸಿ. ಕಂಠಿ, ಕಟ್ಸ್ ಕಂಠಿ, ಕಟ್ಸ್ ಕವರ್ ಕಂಠಿ, ಬಾಂಬೆ ಕಂಠಿ, ಜಿ.ಜಿ. ಕಂಠಿ, ಮುಷ್ಟಿ ಕವರ್ ಕಂಠಿ, ನುಗ್ಗೆ ಕಂಠಿ, ನುಗ್ಗೆ ಪಿರಿ ಕಂಠಿ, ನುಗ್ಗೆ ಕವರ್ ಕಂಠಿ, ಕಟ್ಸ್ ಕವರ್ ಕಂಠಿ, ಕಟ್ಸ್ ಗೋಲು ಕಂಠಿ, ಜೋಮಾಲೆ ಕಂಠಿ, ತ್ರಿರಿಂಗ್ ಕಂಠಿ, ದಳಪತಿ ಕಂಠಿ, ದಳ ಕವರ್ ಕಂಠಿ, ಎಂ.ಸಿ.ಬಿ. ಕಂಠಿ, ಧ್ರುವಂ ಕಂಠಿ, ಫ್ಯಾನ್ಸಿ ಕಂಠಿ, ಪವಿತ್ರ ಕಂಠಿ, ಗೋಲು ಕಂಠಿ, ಚಕ್ರ ಕಂಠಿ, ಚಕ್ರ ಕವರ್ ಕಂಠಿ, ತ್ರಿರಿಂಗ್ ಕ್ಯಾಪ್ ಕಂಠಿ, ಟ್ಯೂಬ್ ಕಂಠಿ, ಫ್ಲಾಟ್ ಕಂಠಿ, ಮುಷ್ಟಿ ಗೋಧಿ ಕಂಠಿ, ಝಿರೋ ಬೀಡ್ಸ್ ಕರಿಮಣಿ, ಶಾರ್ಟ್ ಕರಿಮಣಿ ಸೇರಿ ವಿವಿಧ ಬಗೆಯ ಕಂಠಿಗಳು ಸಂಗ್ರಹದಲ್ಲಿದೆ.