ಮರೋಡಿ: ಇಲ್ಲಿಯ ನಿವಾಸಿ ಅಬ್ಸಾಲಿಯಾಕ ಎಂದೇ ಚಿರಪರಿಚಿತರಾಗಿದ್ದ ಅಬುಸ್ವಾಲಿಹ್ ಅವರು ಜ.15 ರಂದು ನಿಧನರಾಗಿದ್ದಾರೆ.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರೂ, ಕಾಶಿಪಟ್ಣ ದಾರುನ್ನೂರ್ ಸಂಸ್ಥೆಯ ಪಿ.ಟಿ.ಎ.ಅಧ್ಯಕ್ಷರೂ ಆದ ಫಕೀರಬ್ಬ ಮಾಸ್ಟರ್ ಅವರ ತಂದೆಯಾಗಿರುವ ಅಬ್ಸಾಲಿಯಾಕ ಅವರು ಮರೋಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದರು.
ಮರೋಡಿಯಲ್ಲಿ ಸುದೀರ್ಘ ವರ್ಷಗಳಲ್ಲಿ ಅಂಗಡಿ ವ್ಯಾಪಾರದ ಮೂಲಕ ಜನಪ್ರಿಯರಾಗಿದ್ದ ಅವರು ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.