ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾನಗರ, ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಹಳೆಯ ವಿದ್ಯಾರ್ಥಿಗಳ ಸಂಘಗಳ ಸಹಯೋಗದೊಂದಿಗೆ, ಲಾಯಿಲ ಕರ್ನೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕರಿಸಿದ ಶಾಲಾ ಕಟ್ಟಡವನ್ನು ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ನವೀಕರಣ ಕಾರ್ಯದಲ್ಲಿ ಕೆಲವು ತರಗತಿ ಕೊಠಡಿಗಳ ಪುನನಿರ್ಮಾಣ ಮಾಡಿ ಮತ್ತು ರೂ.30 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಹೊಸದಾಗಿ ರೂಪಿಸಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿಜಿಎಂ ಪ್ರಶಾಂತ್ ಜೋಯಿಷಿ, ರೋ| ಪೂರನ್ ವರ್ಮಾ, ರೋ| ಸಂದೇಶ್ ರಾವ್, ರೋ| ಅನಂತ್ ಭಟ್ ಎಂ, ರೋ| ವಿದ್ಯಾಕುಮಾರ್, ರೋ| ಬಿ ಕೆ ಧನಂಜಯ್ ರಾವ್, ರೋ| ಮನೋರಮಾ ಭಟ್, ರೋ| ಡಿ ಎಂ ಗೌಡ, ರೋ| ಶ್ರೀನಾಥ್ ಕೆ ಎಂ, ರೋ| ಉಮಾ ಆರ್ ರಾವ್, ಮೋಹನ್ ಕುಮಾರ್ ಉಪಸ್ಥಿತರಿದ್ದರು.