ಶಿರ್ಲಾಲು: ಕಳೆದ ಹಲವಾರು ವರ್ಷಗಳಿಂದ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕರಂಬಾರು ಗ್ರಾಮದ ಗಾಣದಕೊಟ್ಯ ನಿವಾಸಿ ಶಶಿಧರ ದೇವಾಡಿಗ (37 ವರ್ಷ) ಅವರು ಇಂದು(ಜ.18) ಬೆಳಿಗ್ಗೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬಸ್ ಚಾಲಕರಾಗಿದ್ದ ಇವರು ಎಂದಿನಂತೆ ಇಂದು ಕೂಡ ಕೆಲಸಕ್ಕೆ ಹೊರಟಿರುವ ಸಂದರ್ಭ ಮನೆಯಲ್ಲಿ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಮೃತರು ತಾಯಿ, ಸಹೋದರರಾದ ಶಿರ್ಲಾಲು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವರಾಮ್, ನರೇಶ್ ದೇವಾಡಿಗ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ