ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ನಾವೂರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ನಿರ್ಮಿಸಲಾದ ಶೌಚಾಲಯ ಕಟ್ಟಡವನ್ನು ಹಸ್ತಾಂತರಿಸಲಾಯಿತು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಆರೋಗ್ಯಕರ ಮತ್ತು ಹೆಚ್ಚು ನೈರ್ಮಲ್ಯದ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್‌ನ ಡಿಜಿಎಂ ಪ್ರಶಾಂತ್ ಜೋಯಿಷಿ, ರೋ| ಪ್ರತಾಪ್ ಸಿಂಹ ನಾಯಕ್, ರೋ| ಪೂರನ್ ವರ್ಮಾ, ರೋ| ಸಂದೇಶ್ ರಾವ್, ರೋ| ಅನಂತ್ ಭಟ್ ಎಂ, ವ ವಿದ್ಯಾಕುಮಾರ್, ರೋ| ಅಬೂಬಕರ್, ರೋ| ಡಾ. ಪ್ರದೀಪ್ ಎ, ರೋ| ಶ್ರೀನಾಥ್ ಕೆ ಎಂ, ನಾವೂರು ಗ್ರಾಮ ಪಂಚಾಯತ್‌ನ ಸದಸ್ಯರು ಉಪಸ್ಥಿತರಿದ್ದರು.