March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ಉದ್ಯೋಗಾವಕಾಶಗಳ ಕಾರ್ಯಾಗಾರ

ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸ ಕೋಶ, ಯುವ ರೆಡ್ ಕ್ರಾಸ್ ಘಟಕ, ರೋವರ್ ರೇಂಜರ್ಸ್ ಘಟಕ ಹಾಗೂ ಸ್ನಾತ್ತಕೋತ್ತರ ವಿಭಾಗವು ಮೈಸೂರಿನ ಕೆರಿಯರ್ ಸ್ಪಾರ್ಕ್ ಹಾಗೂ ವನಮಾಲ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ “ಕೆರಿಯರ್ ಆಪರ್ಚುನಿಟಿ ಅಂಡ್ ಜಾಬ್ ಪ್ಲೇಸ್ಮೆಂಟ್” ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ| ಸುಬ್ರಹ್ಮಣ್ಯ ಕೆ. ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಕೆರಿಯರ್ ಸ್ಪಾರ್ಕ್ ಮತ್ತು ವನಮಲ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಪ್ರಸಾದ್ ಎಸ್. ಎಂ. ಭಾಗವಹಿಸಿ , ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಪಡೆದುಕೊಳ್ಳಲು ಇರುವ ಅವಕಾಶಗಳು ಅದಕ್ಕೆ ಬೇಕಾಗಿರುವ ವಿವಿಧ ಕೌಶಲ್ಯಗಳ ಬಗ್ಗೆ ತಿಳಿಸಿ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಸುರೇಶ್ ವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ವಿಭಾಗದ ಸಂಚಾಲಕರಾದ ಡಾ. ರವಿ ಎಂ. ಏನ್., ಪ್ರಾಧ್ಯಾಪಕರಾದ ಪ್ರೊ| ನವೀನ್ ಹಾಗೂ ಪ್ರೊ| ಮಾರುತಿ ಉಪಸ್ಥಿತರಿದ್ದರು.

ಕು| ಅಶ್ವಿತಾ ಮತ್ತು ಪ್ರಜ್ಞಾ ಪ್ರಾರ್ಥನೆ ನೆರವೇರಿಸಿದರು. ಕು| ಅನನ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ನಡ: ಪರಾರಿ ನಿವಾಸಿ ಅರುಣ್ ನಿಧನ

Suddi Udaya

ದ್ವಿತೀಯ ಪಿಯು ಫಲಿತಾಂಶ: ಅರಸಿನಮಕ್ಕಿ ಪದವಿ ಪೂರ್ವ ಕಾಲೇಜಿಗೆ ಶೇ. 84.6 ಫಲಿತಾಂಶ

Suddi Udaya

ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಕುಮಾರ್ ಗೆ ಗೌರವ

Suddi Udaya

ಜಾನಪದ ಕಡಲೋತ್ಸವ: ಜಿಲ್ಲಾ ಪರಿಷತ್ ಪ್ರಶಸ್ತಿಗೆ ಕೊಕ್ಕಡದ ಕಿಟ್ಟ ಮಲೆಕುಡಿಯ ರವರು ಆಯ್ಕೆ

Suddi Udaya

ಮುಂಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ ಸಭೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಉಜಿರೆ ಹಳೆಪೇಟೆಯಲ್ಲಿ ಹೊಳೆಯಂತಾದ ರಸ್ತೆ: ವಾಹನ ಸವಾರರ ಪರದಾಟ

Suddi Udaya
error: Content is protected !!