ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.ಭಾ.ಸಾ.ಪ. ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಮೊದಲ ಅಧ್ಯಾಯ

ಗುರುವಾಯನಕೆರೆ: ನಮ್ಮ ಮನೆ ಹವ್ಯಕ ಭವನದಲ್ಲಿ ಅ.ಭಾ ಸಾ.ಪ . ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಗಣಪತಿ ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಮೊದಲ ಅಧ್ಯಾಯವು ಜ.19ರಂದು ನಡೆಯಿತು.

ಕಾರ್ಯಕ್ರಮಕ್ಕೆ ಹವ್ಯಕ ಭವನದ ಕ್ರಿಯಾ ಸಮಿತಿಯ ಕಾರ್ಯದರ್ಶಿ ವೆಂಕಪ್ಪಯ್ಯ ದೀಪ ಪ್ರಜ್ವಲಿಸಿ, ಶಾರದಾ ಮಾತೆ ಮತ್ತು ಭಾರತಾಂಬೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಗೈಯುವುದರ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಅತಿಥಿಗಳಾದ ವೆಂಕಪ್ಪಯ್ಯ ಇವರನ್ನು ಪ್ರೊ. ಗಣಪತಿ ಕುಳಮರ್ವ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಡಾ. ಶ್ರೀಧರ್ ಭಟ್ ಇವರನ್ನು ಶ್ರೀಮತಿ ಸುಭಾಷಿಣಿ ಇವರು ತಾಂಬೂಲ ನೀಡಿ ಗೌರವಿಸಿದರು.

ಸಮಿತಿಯ ಸದಸ್ಯೆ ಶ್ರೀಮತಿ ಸಂತೋಷಿನಿ ಇವರು ಶಾರದೆಯನ್ನು ಸ್ತುತಿಸಿದರು. ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ರಚನೆಯ ಆಶಯಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.
ಡಾ. ಶ್ರೀಧರ ಭಟ್ ಇವರು ಗೀತೆಯ ಸ್ವರೂಪ,ಸಾರ, ಅದು ಸಾಹಿತ್ಯಕ್ಕೆ ಹೇಗೆ ಆಧಾರಶಿಲೆಯಾಗಿದೆ ಎನ್ನುವುದನ್ನು ಮಾತನಾಡಿ, ಜೀವನ ಪದ್ಧತಿಯನ್ನು ತಿಳಿಸುವ ಗೀತೆಯ ಸಾರದಂತೆ ಜೀವನದ ಯಾವುದೇ ಕ್ಲಿಷ್ಟಕರ ಸನ್ನಿವೇಶದಲ್ಲಿ ಪಲಾಯನ ಮಾಡದೆ, ಯಾವುದೇ ಬಂಧಗಳಿಗೆ ಅಂಟಿಕೊಳ್ಳದೆ ಧೈರ್ಯದಿಂದ ಎದುರಿಸಬೇಕು ಎಂದು ಉದಾಹರಣೆಗಳೊಂದಿಗೆ ಬಹಳ ಮನೋಜ್ಞವಾಗಿ ತಿಳಿಸಿದರು.


ಕಾರ್ಯಕ್ರಮದ ಅತಿಥಿಗಳಾದ ವೆಂಕಪ್ಪಯ್ಯ ಇವರಿಗೆ ಹಿರಿಯರಾದ ಗೋಪಾಲಕೃಷ್ಣರಾವ್ ಅಡೂರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಧರ್ ಭಟ್ ಇವರಿಗೆ ವೇದವ್ಯಾಸ ಶಿಶು ಮಂದಿರದ ಅಧ್ಯಕ್ಷರಾದ ಶ್ರೀಮತಿ ಇಂದುಮತಿ ಇವರು ಪುಸ್ತಕ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಮಕ್ಕಳ ಪ್ರಕಾರದ ಪ್ರಮುಖ್ ಶ್ರೀಮತಿ ಮೇಧ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಧನ್ಯವಾದವನ್ನಿತ್ತರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸದಸ್ಯರು, ಸ್ಥಳೀಯ ಭಜನಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವೇದವ್ಯಾಸ ಶಿಶುಮಂದಿರದ ಪದಾಧಿಕಾರಿಗಳು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪ್ರಥಮ ಅಧ್ಯಾಯದ ಪ್ರಯೋಜನವನ್ನು ಪಡೆದುಕೊಂಡರು.

Related posts

ಚುನಾವಣಾ ನೀತಿ ಸಂಹಿತೆ ವೇಳೆ ಬೆಳ್ತಂಗಡಿ ಅಬಕಾರಿ ದಳದ ಮಿಂಚಿನ ಕಾರ್ಯಾಚರಣೆ: ಬೆಳ್ತಂಗಡಿ ತಾಲೂಕಿನಲ್ಲಿ 144 ಅಕ್ರಮ ಮದ್ಯ ಪ್ರಕರಣ ದಾಖಲು:

Suddi Udaya

ಶಿವಳ್ಳಿ ಸಮಾಜದ ಅರಸಿನಮಕ್ಕಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ವೇಣೂರು: ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಂತೆ ಸನಾತನ ಹಿಂದೂ ಧರ್ಮದ 300 ಹೆಣ್ಣು ಮಕ್ಕಳಿಗೆ ಉಚಿತ ಮೂಗುತಿ ಧಾರಣೆ

Suddi Udaya

ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆಯ ಪ್ರಯುಕ್ತ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

Suddi Udaya

ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಬಾರ್ಯ ಮಂಡಲದ ಹಿಂದೂ ಸಂಗಮ

Suddi Udaya
error: Content is protected !!