29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ‌.ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಭೇಟಿ

ಬೆಳ್ತಂಗಡಿ: ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಕಾವೂರು ಮಂಗಳೂರು ಇಲ್ಲಿನ ಪೂಜ್ಯ ಶ್ರೀ ಶ್ರೀ ಡಾ‌.ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ, ಉದಯವಾಣಿ ಪತ್ರಿಕೆಯ ಮುಖ್ಯ ವರದಿಗಾರ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಜ.20 ರಂದು ಭೇಟಿ ನೀಡಿ ಹರಸಿ, ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ‌.ಗಂಗಾಧರ ಗೌಡ, ಪುತ್ತೂರು ಮಾಜಿ ಶಾಸಕ ಸಂಜೀವ ಗೌಡ ಮಠಂದೂರು, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಜತೆಗಿದ್ದರು.

ಆಗಮಿಸಿದ ಸ್ವಾಮೀಜಿ ಹಾಗೂ ಗಣ್ಯರಿಗೆ ಚೈತ್ರೇಶ್ ಇಳಂತಿಲ ಮತ್ತು ಕುಟುಂಸ್ಥರು ಫಲ ಕಾಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಸಂಜೀವ ಮಠಂದೂರು ಅವರನ್ನು ಗೌರವಿಸಿದರು. ಬಳಿಕ ಸ್ವಾಮೀಜಿ ಹಾಗೂ ಗಣ್ಯರಿಗೆ ಹಣ್ಣಿನ ಗಿಡಗಳನ್ನು ನೀಡಿ ಸತ್ಕರಿಸಿದರು.

ಹಣ್ಣಿನ ಗಿಡದ ಮಹತ್ವ ತಿಳಿದ ಶ್ರೀಗಳು, ನೆರದವರಿಗೆ ಅಕ್ಷತೆ ನೀಡಿ ನೂತ‌‌ನ ಹರಿಸಿದರು.

Related posts

ಕುಂಭಶ್ರೀ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆ

Suddi Udaya

ಬಳಂಜ: ಮರಿಯಾಲಡೊಂಜಿ ಐತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ: ಆ. 20 ಆಟಿಕೂಟದ ಗಮ್ಮತ್ ಲೇಸ್, ವಾರ್ಷಿಕ ಮಹಾಸಭೆ

Suddi Udaya

ಪುಂಜಾಲಕಟ್ಟೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಬೆನ್ನುಹುರಿ ಅಪಘಾತ  ಮಾಹಿತಿ ಕಾರ್ಯಾಗಾರ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟ: ಸ್ಟಾರ್ ಲೈನ್ ಆಂ. ಮಾ. ಶಾಲೆ ರಝಾ ಇಲ್ಲಿಯ ವಿದ್ಯಾರ್ಥಿ ಮೊಹಮ್ಮದ್ ಶಮ್ಮಾಜ್ ಶರೀಫ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆಯಲ್ಲಿ ದ.ಕ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya
error: Content is protected !!