September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

ಉಜಿರೆ : ಎಸ್. ಡಿ. ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಟಿಡೊಂಜಿ ದಿನದ ಸಂಭ್ರಮ ಇಂದು ಮನೆ ಮಾಡಿತ್ತು. ಶಾಲೆಯು ತೆಂಗಿನ ಗರಿಯಿಂದ ಮಾಡಿದ ವಿವಿಧ ಆಕೃತಿಯಿಂದ ಮದುವಣಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು. ಶಾಲೆಯ ಮೂಲೆ ಮೂಲೆಯಲ್ಲೂ ತುಳುನಾಡಿಗೆ ಸಂಬಂಧಪಟ್ಟಂತ ವಿವಿಧ ಭಕ್ಷ ಭೋಜ್ಯ, ಆಟಿಯಲ್ಲಿ ಆಡುವಂತಹ ವಿಶೇಷ ಆಟಗಳು ರಾರಾಜಿಸಿದವು.

ತುಳುನಾಡಿನ ಕಲೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಆಹಾರ, ಆರೋಗ್ಯವನ್ನು ಆಟಿ ದಿನಗಳಲ್ಲಿ ಹೇಗೆ ಕಾಯ್ದುಕೊಳ್ಳಬೇಕು ಎಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತುಳು ನಾಡಿಗೆ ಹಾಗೂ ತುಳು ಭಾಷೆಗೆ ಸಂಬಂಧಪಟ್ಟಂತಹ ಹಾಡು, ಗಾದೆ, ಸಂಧಿ ಪಾಡ್ದನ, ನೃತ್ಯ, ಭಿತ್ತಿ ಪತ್ರಿಕೆ, ಆಟಿ ತಿಂಗಳಿನ ತಿನಿಸುಗಳ ಪ್ರದರ್ಶನವನ್ನು ಹಾಗೂ ದೇಸಿ ಆಟಗಳನ್ನು ಸಹ ಏರ್ಪಡಿಸಲಾಗಿತ್ತು.

ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿಗಳಾದ ಆರ್ಯಮನ್ ಹಾಗೂ ತ್ರಿಜಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪೃಥ್ವಿ ವಂದಿಸಿದರು.

Related posts

ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಕೆಳಗೆ ಬಿದ್ದ ಒಂದೇ ಮನೆಯ ಇಬ್ಬರು ವಿದ್ಯಾರ್ಥಿನಿಯರು: ಗೇರುಕಟ್ಟೆ ರೇಷ್ಮೆ ರೋಡ್ ಬಳಿ ನಡೆದ ಘಟನೆ

Suddi Udaya

ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮ ನಿಧಿ ಉಜಿರೆಯ ಉದ್ಯಮಿ, ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರಿಂದ 50 ಸಾವಿರ ದೇಣಿಗೆ ಹಸ್ತಾಂತರ

Suddi Udaya

ಪುತ್ತೂರಿನ ರಾಧಾ’ಸ್ ನಲ್ಲಿ ಆಫರ್‌ಗಳ ಬಿಗ್‌ಬಾಸ್: ರಾಧಾ’ಸ್ ಉತ್ಸವದ ಎರಡನೇ ವಾರದ ಡ್ರಾ.

Suddi Udaya

ತುಳುವ ಮಹಾಸಭೆ ಬೆಳ್ತಂಗಡಿ ತಾಲೂಕು ಸಂಚಾಲಕರಾಗಿ ಡಾ. ದಿವ ಕೊಕ್ಕಡ ಆಯ್ಕೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya

ಕರಾಯ ಶ್ರೀಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಕಾರ್ಯಾಲಯ ಕಛೇರಿ ಉದ್ಘಾಟನೆ

Suddi Udaya
error: Content is protected !!