September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಗ್ರಾ.ಪಂ. ನಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ 3ನೇ ವರ್ಷದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಪಂಚಾಯಿತಿ ಸಭಾಭವನದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ವಹಿಸಿಕೊಂಡು ವಿಶೇಷ ಚೇತನ ಮಕ್ಕಳು ದೇವರ ಸಮಾನ ಅವರನ್ನು ದೇವರಾಗಿ ಕಾಣಿ ಹೊರತಾಗಿ ಹೊರೆಯಾಗಿ ಕಾಣಬೇಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ ನೆರವೇರಿಸಿ ವಿಶೇಷ ಚೇತನರು ದೇವರ ಮಕ್ಕಳು ದೇವರ ಆಲಯಕ್ಕೆ ಇಂದು ನಾನು ಬಂದಿದ್ದೇನೆ .ವಿಶೇಷ ಚೇತನರು ಅಬಲರಲ್ಲ ಸಬಲರು ಅನುಕಂಪ ಹೊರತಾಗಿ ಅವಕಾಶ ನೀಡಬೇಕು ಎಂದು ಹೇಳಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ತಾಲೂಕು ವಿವಿಧೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಷ್ಟಿಸ್ಟ್ ಡಿಸೋಜಾ ಮಾತನಾಡಿ ತಾಲೂಕಿನಲ್ಲಿ 48 ಗ್ರಾಮಗಳಲ್ಲಿ ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ನಡೆದ ಈ ಸಭೆಯು ತಾಲೂಕಿಗೆ ಮಾದರಿ ಇದು ಪಂಚಾಯತ್ ಆಡಳಿತ ಮಂಡಳಿ ಮತ್ತು ಊರ ದಾನಿಗಳ ಸಹಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಜಾಹ್ನವಿ ಇವರನ್ನು ಸನ್ಮಾನಿಸಿ ವಸಂತ ಮರಕಡ ಇವರು ಪ್ರೋತ್ಸಾಹ ಧನ ನೀಡಿದರು ಹಾಗೂ ಅಶೋಕ್ ನಾಯ್ಕ ಪಲ್ಲಿದಡ್ಕ ಹೇಮನಾಥ್ ನಾಯ್ಕ ಸುರುಳಿ ಇವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ 12 ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ದಾನಿಗಳಾದ ಜಯಣ್ಣ ಮಿನಂದೇನುಲು, ಶ್ರೀನಿವಾಸ್ ಗೌಡ ನೋಟರಿ ವಕೀಲರು, ಸುರೇಶ್ ದಾಸ್ ಗಾಂಧಿನಗರ ಮಾಯಾ, ಲಕ್ಷ್ಮಣ ಪೂಜಾರಿ ಪಳಸಾ ಮಾಯ 57 ವಿಕಲಚೇತನರಿಗೆ ತಲಾ 5 ಕೆಜಿ ಅಕ್ಕಿಯನ್ನು ನೀಡಿದರು.

ಶಾಮಿಯಾನದ ಪ್ರಯೋಜಕರಾದ ಅರ್ಚನ್ ಸೌತೆ ಗದ್ದೆ, ಸೌಂಡ್ ಪ್ರಯೋಜಕರಾಗಿ ಸಂತೋಷ್ ಕನಿಕಿಲ, ಊಟೋಪಚಾರದ ಪ್ರಾಯೋಜಕರಾಗಿ ವಿಮಲಾ ನಾಯ್ಕ, ಕಾರ್ಯದರ್ಶಿ ಕಾವಲಪಡೂರು ಸಹಕರಿಸಿದರು.

ವೇದಿಕೆಯಲ್ಲಿ ಬೆಳಾಲು ಗ್ರಾಮ ಪಂಚಾಯಿತಿನ ಸದಸ್ಯರಾದ ದಿನೇಶ್ ಕೋಟ್ಯಾನ್ ಸತೀಶ್ ಎಳ್ಳುಗದ್ದೆ ,ಶ್ರೀಮತಿ ಪ್ರೇಮ , ಶ್ರೀಮತಿ ಓಬಕ್ಕ, ಯೋಗೀಶ್ ಸೌತೆ ಗದ್ದೆ ,ಜಯರಾಮ ಮಯ್ಯ ಮುಖ್ಯ ಉಪಾಧ್ಯಾಯರು ,ಎಂ ಜೆ ಜೋಸೆಫ್ ವಿ ಆರ್ ಡಬ್ಲ್ಯೂ ಇಂದಬೆಟ್ಟು ಮಜೀದ್ ಮುಂಡಾಜೆ ಉಪಸ್ಥಿತರಿದ್ದರು.

ನಾಡಗೀತೆಯನ್ನು ಪಂಚಾಯಿತಿ ಸಿಬ್ಬಂದಿ ಶಶಿಧರ ಓಡಿಪ್ರೊಟ್ಟು ಹಾಡಿ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯಕ್ ಸ್ವಾಗತಿಸಿ, ಈರಣ್ಣ ವಿ ಆರ್ ಡಬ್ಲ್ಯೂ ಬೆಳಾಲು ಪ್ರಸ್ತಾವಿಕ ಹಾಗೂ ನಿರೂಪಿಸಿದರು. ಸದಸ್ಯ ಸತೀಶ್ ಎಳ್ಳುಗದ್ದೆ ಧನ್ಯವಾದವಿತ್ತರು.

Related posts

ಫೆ. 2 : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಸಂಗ್ರಾಮ್; ಉದ್ಯೋಗ ಖಾತ್ರಿ ಯೋಜನೆಯ ಬಚಾವ್‌ ಆಂದೋಲನ: ಪ್ರದೀಪ್ ಈಶ್ವರ್ ಭಾಗಿ

Suddi Udaya

ನಿಡ್ಲೆ ಸರಕಾರಿ ಪ್ರೌಢಶಾಲೆಗೆ 1990ರ ಎಸ್ ಎಸ್ ಎಲ್ ಸಿ ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ ತಾ. ಪಂ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ್ ಹೊಳೆನರಸೀಪುರಕ್ಕೆ ವಗಾ೯ವಣೆ: ಕಡಬ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ರವರಿಗೆ ಅಧಿಕಾರ ಹಸ್ತಾoತರ

Suddi Udaya

ಪಿಯು ಫಲಿತಾಂಶ: ಮುಂಡಾಜೆ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ತಾಲೂಕು ಶಿಕ್ಷಕರಿಗೆ ಗುರುಸ್ಪಂದನ ಕಾರ್ಯಕ್ರಮ

Suddi Udaya

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಗೆ ಮದರ್ ತೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್

Suddi Udaya
error: Content is protected !!