ಕರಿಮಣೇಲು: ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಕರಿಮಣೇಲು ಜ.22 ರಿಂದ 24ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಪ್ರಯುಕ್ತ ನವೀಕರಣಗೊಂಡ ಸಭಾಭವನ ಹಾಗೂ ಹೊಸತಾಗಿ ನಿರ್ಮಿಸಿದ ಪಾಕ ಶಾಲೆ ಭೋಜನ ಶಾಲೆಯನ್ನು ಜ. 21ರಂದು ಶಾಸಕ ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಭಟ್, ಶ್ರೀ ಮಹಾದೇವ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ನಾಯಕ್, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ಭಟ್, ಅರ್ಚಕರಾದ ಚಂದ್ರಶೇಖರ್ ಅಸರಣ್ಣ, ಶ್ರವಣ್ ಕಾಂತಾಜೆ , ರಾಮದಾಸ್ ನಾಯಕ್, ರಮೇಶ್ ಹೆಗ್ಡೆ ಕುಕ್ಕಾಜೆ, ಜಿನ್ನು ಕರಿಮಣೇಲು, ಹರೀಶ್ ಅಂಚನ್ ಕರಿಮಣೇಲು, ಸಂತೋಷ್ ದೇವಾಡಿಗ, ಗಣೇಶ್ ಭಂಡಾರಿ, ಹರೀಶ್ ದೇವಾಡಿಗ, ಯಶೋಧರ ಹೆಗ್ಡೆ, ಗಣೇಶ್ ದೇವಾಡಿಗ, ಯೋಗೀಶ್ ದೇವಾಡಿಗ ಹಾಗೂ ಊರವರು ಉಪಸ್ಥಿತರಿದ್ದರು.