ಗುರುವಾಯನಕೆರೆ: ಇಲ್ಲಿಯ ಶ್ರೀ ಶಾರದಾಂಬ ಯಕ್ಷಕಲಾ ತಂಡ ಇದರ ವತಿಯಿಂದ ಆರಂಭಗೊಂಡ ಯಕ್ಷಗಾನ ನಾಟ್ಯ ತರಬೇತಿಯ ತರಗತಿಯನ್ನು ಭಾಗವತರು ಹಾಗೂ ನಾಟ್ಯ ಶಿಕ್ಷಕರಾದ ದೇವಿಪ್ರಸಾದ್ ಆಚಾರ್ಯ ಅವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮೆಸ್ಕಾಂ ಅಧಿಕಾರಿ ಹಾಗೂ ಹವ್ಯಾಸಿ ಕಲಾವಿದರಾದ ಯೋಗಿಶ್ ಆಚಾರ್ಯ, ಶ್ರೀ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೀತಾ,ವೈ.ಆಚಾರ್ಯ, ತಾಲೂಕು ಯುವಜನ ಒಕ್ಕೂಟದ ಶ್ರೀಮತಿ ಸುಧಾಮಣಿ ಆರ್, ಗೆಳೆಯರ ಬಳಗದ ಕಾರ್ಯದರ್ಶಿ ಮಂಜುನಾಥ್ ಕುಂಬ್ಳೆ, ಹಾಗು ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ರಚನಾ ಕೆ. ಉಪಸ್ಥಿತರಿದ್ದು, ಶುಭ ಕೋರಿದರು. ಪ್ರತಿ ಶನಿವಾರ ತರಗತಿ ನಡೆಸಲಾಗುವುದು ಎಂದು ಸಂಯೋಜಕರು ತಿಳಿಸಿದರು.