April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುಂಜಾಲಕಟ್ಟೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಸಾಧಕ 10 ವಿದ್ಯಾರ್ಥಿಗಳಿಗೆ ಸನ್ಮಾನ

ಪುಂಜಾಲಕಟ್ಟೆ: ಜ.19 ರಂದು ಪುಂಜಾಲಕಟ್ಟೆ ಬಂಗ್ಲ ಮೈದಾನದಲ್ಲಿ ಯಮತೋ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಬೆಳ್ತಂಗಡಿ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.


ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗಗುತ್ತು ಮತ್ತು ಗೌರವಾಧ್ಯಕ್ಷರಾದ ತುಂಗಪ್ಪ ಬಂಗೇರ ಶುಭ ಹಾರೈಸಿದರು. ವೇದಿಕೆಯಲ್ಲಿ ಕರಾಟೆ ಮುಖ್ಯ ಶಿಕ್ಷಕರಾದ ಶಾಜು, ಮಲವಾನ. ರಾಜ್ಯ ಮುಖ್ಯ ಶಿಕ್ಷಕರಾದ ನಾರಾಯಣ ಕೆ ಪೂಜಾರ್ ಹಾವೇರಿ, ರೊ| ರಾಘವೇಂದ್ರ ಭಟ್, ಶಿವಪ್ರಸನ್ನ ಆಚಾರ್ಯ , ಶಿವಪ್ರಸಾದ್ ರೈ, ಸುಧಾಕರ್ ಆಚಾರ್ಯ ಬಜಾರ್ ಗ್ರೂಪ್ ಹಾಗೂ ವಿಜಯ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಪತ್ರಕರ್ತ ಮನೋಹರ್ ಬಳೆಂಜ, ಝಕೀರ್ ಹುಸೇನ್, ಉದಯಕುಮಾರ್,ಪ್ರವೀಣ್ ಕುಮಾರ್ ಕುರ್ಡುಮೆ, ಪುಷ್ಪಲತಾ ಮೋಹನ್, ಜೆರಲ್ಡ್ ಫರ್ನಾಂಡಿಸ್, ಪ್ರಕಾಶ್ ಪೂಜಾರಿ ಹಾಗೂ ಜೋಕಿಂ ಪಿಂಟೋ ಉಪಸ್ಥಿತರಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮನಿಷಾ ಎಂ. ಕಬೂರ್ ನಿರೂಪಿಸಿದರು.


ಈ ಪಂದ್ಯಾಟದ ಆಯೋಜನೆಯನ್ನು ಸೆನ್ಸಾಯ್ ಅಶೋಕಚಾರ್ಯ ,ಕೋಚ್ ಮಿಥುನ್ ರಾಜ್, ಸಿಂಚನ ಎಂ. ಡಿ, ಶ್ರವಣ್ ಎಸ್, ಅನಂತ್, ಫ್ರಾನ್ಸಿಸ್ ಸಾಬು, ಶೇಕ್‌ಕಲ್ಫಾನ್ ಹುಸೇನ್, ಪ್ರಜ್ವಲ್ ಆಚಾರ್ಯ, ಜಿತೇಶ್, ಸುಕೇಶ್ ಪೂಜಾರಿ ಮಾಡಿದ್ದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಣಿಯೂರು ವಲಯದ ಮೈರೋಲ್ತಡ್ಕ, ಮೊಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಭಾರೀ ಮಳೆಗೆ ತೆಕ್ಕಾರು ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯ ಕಾಂಪೌಂಡ್ ಕುಸಿತ

Suddi Udaya

ಲಾಯಿಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕಾಲೇಜಿನ ಕಂಪೌಂಡಿಗೆ ಡಿಕ್ಕಿ

Suddi Udaya

ನಾರಾವಿ: ‘ಸನ್ನಿಧಿ’ ನೂತನ ಟೈಲರಿಂಗ್ ಸೆಂಟರ್ ಶುಭಾರಂಭ

Suddi Udaya

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ: ಮಚ್ಚಿನ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಶಾಸಕ ಹರೀಶ್ ಪೂಂಜರ ಮನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು: ನಿನ್ನೆಯ ಡೇಟ್ ಹಾಕಿ ಇಂದು ನೋಟಿಸ್ ನೀಡಿದ ಪೊಲೀಸ್ ಇಲಾಖೆ ಶಾಸಕರ ಪರ ವಕೀಲರ ವಾದ

Suddi Udaya
error: Content is protected !!