ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆಯು ಜ.೨೪ರಿಂದ ಪ್ರಾರಂಭಗೊಂಡು ಜ.30ರವರೆಗೆ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಜರುಗಲಿರುವುದು.
ಕಾರ್ಯಕ್ರಮಗಳು:
ಜ.24ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ರಾತ್ರಿ ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ-ನಿತ್ಯಬಲಿ, ದೀಪದ ಬಲಿ, ಅಂಗನವಾಡಿ ಕೇಂದ್ರ ಗೋವಿಂದೂರು, ಎರುಕಡಪು, ರಕ್ತೇಶ್ವರಿ ಪದವು, ಸ.ಕಿ.ಪ್ರಾ ಶಾಲೆ ರಕ್ತೇಶ್ವರಿಪದವು, ಸರ್ಕಾರಿ ಪ್ರೌಢಶಾಲೆ ಗೇರುಕಟ್ಟೆ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ.25 ರಂದು ಉಷಾಕಾಲ ಪೂಜೆ, ಮಹಾಪೂಜೆ-ನಿತ್ಯಬಲಿ, ಅನ್ನಸಂತರ್ಪಣೆ. ಸಂಜೆ ದೇವರ ಬಲಿ ಹೊರಟು ಕೆರೆಕಟ್ಟೆ ಉತ್ಸವ, ಮಹಾಪೂಜೆ-ನಿತ್ಯಬಲಿ, ದೀಪದ ಬಲಿ. ಅಂಗನವಾಡಿ ಕೇಂದ್ರ ನಾಳ ಹಾಗೂ ಸರ್ಕಾರಿ ಹಿ.ಪ್ರಾ. ಶಾಲೆ ನಾಳ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಕೇಸರಿ ಗೆಳೆಯರ ಬಳಗ ನಾಳ ಇದರ ಮೋಕೆದ ಕಲಾವಿದೆರ್ ಅಭಿನಯಿಸುವ ಚೇತನ್ ವರ್ಕಾಡಿ ವಿರಚಿತ ತುಳು ಹಾಸ್ಯಮಯ ನಾಟಕ “ಏರೆನ್ ನಂಬೊಡು” (ಈ ಭೂಮಿದ ಮಿತ್ಡ್) ಪ್ರದರ್ಶನಗೊಳ್ಳಲಿದೆ. ಜ.26ರಂದು ಉಷಾಕಾಲ ಪೂಜೆ, ಮಹಾಪೂಜೆ-ನಿತ್ಯಬಲಿ, ಅನ್ನಸಂತರ್ಪಣೆ. ಸಂಜೆ ದೇವರ ಬಲಿ ಹೊರಟು ಚಂದ್ರಮAಡಲ ಉತ್ಸವ, ರಥಬೀದಿ ಕಟ್ಟೆಪೂಜೆ, ಪ್ರಸಾದ ವಿತರಣೆ, ಮಹಾಪೂಜೆ-ನಿತ್ಯ ಬಲಿ, ದೀಪದ ಬಲಿ. ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾ. ಶಾಲೆ ಕೊರಂಜ, ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿ. ಸ್ಕೂಲ್ ಆಫ್ ಡಾನ್ಸ್, ಉಜಿರೆ ಇವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಜ.27ರಂದು ಬೆಳಿಗ್ಗೆ ದೇವರ ಉತ್ಸವ ಬಲಿ ಹೊರಡುವುದು. ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ. ಮಹಾ ಅನ್ನಸಂತರ್ಪಣೆ. ಸಂಜೆ ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಯುವುದು. ರಥಕಲಶ, ರಾತ್ರಿ ದೇವರ ಉತ್ಸವ ಬಲಿ ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ. ಮಹಾರಥೋತ್ಸವ ಶ್ರೀ ಭೂತಬಲಿ-ಕವಾಟ ಬಂಧನ. ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಜ.28ರಂದು ಬೆಳಿಗ್ಗೆ ಸುಲಗ್ನದಲ್ಲಿ ಕವಾಟೋದ್ಘಾಟನೆ ದಿವ್ಯದರ್ಶನ ಮಹಾಪೂಜೆ ಚೂರ್ಣೋತ್ಸವ ಬಲಿ, ತುಲಾಭಾರ, ಕೊಡಿಮರಕ್ಕೆ ಜಾನುವಾರು ಒಪ್ಪಿಸುವುದು, ಅನ್ನಸಂತರ್ಪಣೆ. ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದ ಭೇಟಿ ಮತ್ತು ಗಗ್ಗರ ಸೇವೆ, ಅವಧೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಊರ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಜ.29ರಂದು ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ಭಜನಾ ವರ್ಧಂತಿ, ರಂಗಪೂಜೆ, ಮಹಾ ಮಂತ್ರಾಕ್ಷತೆ, ಊರ ಹವ್ಯಾಸಿ ಕಲಾವಿದರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಸಾಲ್ಯಾನ್ ವೇಣೂರು ವಿರಚಿತ ತುಳು ಸಾಮಾಜಿಕ ನಾಟಕ “ವಸಂತಿಯಕ್ಕ ಓಲುಲ್ಲೆರ್‌ಗೆ…” ನಡೆಯಲಿದೆ. ಜ.೩೦ರಂದು ರಾತ್ರಿ ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮತ್ತು ಊರ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಬಯಲಾಟ ನೂತನ ಪ್ರಸಂಗ ನಡೆಯಲಿದೆ. ಫೆ.೨೨ರಂದು ರಾತ್ರಿ ಮಾಡ್ತಾö್ಯರುಗುಡ್ಡೆಯಲ್ಲಿ ಕ್ಷೇತ್ರದ ದೈವಗಳಾದ ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.