22.5 C
ಪುತ್ತೂರು, ಬೆಳ್ತಂಗಡಿ
January 27, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿವರದಿ

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ – 7 ಸ್ಥಾನ, ಕಾಂಗ್ರೆಸ್ – 5 ಸ್ಥಾನ

ಬೆಳ್ತಂಗಡಿ: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನವನ್ನು ಪಡೆದು ಜಯ ಸಾಧಿಸಿದರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಶೋಕ್ ಕುಮಾರ್, ದಾಮೋದರ ಗೌಡ, ಕೇಶವ ಪೂಜಾರಿ, ರವೀಂದ್ರನಾಥ್ ಪಿ, ಪುರುಷೋತ್ತಮ, ಕುಸುಮಾವತಿ, ಶೋಭಾ ವಿಜಯಿಯಾದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಜ್ವಲ್ ಕುಮಾರ್, ನವೀನ್ ಕುಮಾರ್, ಪರಮೇಶ್ವರ ಗೌಡ, ಯತೀಶ್ ದಡ್ಡು, ಸಂಜೀವ ಮಲೆಕುಡಿಯ ವಿಜಯಿಯಾದರು.

ಚುನಾವಣಾಧಿಕಾರಿಯಾಗಿ ಪ್ರತಿಮಾ ಬಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಕೊಯ್ಯೂರು ಸಿಎ ಬ್ಯಾಂಕಿನ ಸಿಇಓ ಅನಂತಕೃಷ್ಣ ರವರು ಹಾಗೂ ಸಿಬ್ಬಂದಿಗಳು ಸಹಕರಿಸಿದರು. ಫಲಿತಾಂಶ ಘೋಷಣೆಗೆ ಕೋರ್ಟ್ ತಡೆಯಿರುವುದರಿಂದ ಕೋರ್ಟು ತೀರ್ಪಿನ ಬಳಿಕ ಘೋಷಣೆಯಾಗಲಿದೆ.

Related posts

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ವಾರ್ಷಿಕ ಸಾಂಸ್ಕೃತಿಕ ದಿನಾಚರಣೆ

Suddi Udaya

ಮುಂಡಾಜೆ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ನ್ಯಾಯತರ್ಪು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿಜಯ ಗೌಡ ಕಲಾಯಿತೊಟ್ಟು ಆಯ್ಕೆ

Suddi Udaya

ಗುರುವಾಯನಕೆರೆ ಯಕ್ಷಗಾನ ನಾಟ್ಯ ತರಗತಿಗೆ ಚಾಲನೆ

Suddi Udaya

ಡಿ. 02: ಉಜಿರೆಯಲ್ಲಿ ಜಿಲ್ಲಾಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆ

Suddi Udaya
error: Content is protected !!