March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಮುಗೇರಡ್ಕ: ಮೂವರು ದೈವಗಳ ದೈವಸ್ಥಾನ ಮುಗೇರಡ್ಕದ ವಾರ್ಷಿಕ ನೇಮೋತ್ಸವ ಮಕರ ಸಂಕ್ರಮಣದಂದು ಗೊನೆ ಮಹೂರ್ತವಾಗಿ ಜ. 18ಕ್ಕೆ ಕೋಳಿಗೂಟ, ಜ.22 ನೇ ರಾತ್ರಿ ಅಂತರ ಮತ್ತು ದೇವಸ್ಯ ಬಂಡಾರ ಮನೆಯಿಂದ ಮುಗೇರಡ್ಕ ಕ್ಷೇತ್ರಕ್ಕೆ ದೈವದ ಭಂಡಾರ ಆಗಮಿಸಿದ ನಂತರ ಶಿರಾಡಿ ದೈವಕ್ಕೆ ಹೊಸದಾಗಿ ನಿರ್ಮಾಣ ಮಾಡಿದ ಹುಲಿ ಬಂಡಿ ಒಪ್ಪಿಸುವ ಕಾರ್ಯಕ್ರಮ ಮದ್ಯ ರಾತ್ರಿ ಜರುಗಿತು.

ನಂತರ ದೈವಂಕುಲು, ಬಿರ್ಮೆರ್, ಕುಮಾರ, ಗಿಳಿರಾಮ, ಬಸ್ತಿನಾಯ್ಕ ಇನ್ನಿತರ ಪರಿವಾರ ದೈವಗಳ ನೇಮ ಕಾರ್ಯ ನಡೆಯಿತು. ಜ.23ರಂದು ಕಲ್ಕುಡ ದೈವ ಪಿಲಿಚಾಮುಂಡಿ ದೈವ ಹಾಗೂ ಶಿರಾಡಿ ದೈವದ ಗಗ್ಗರ ಸೇವೆ ಆರಂಭವಾಗಿ ದಿನವಿಡೀ ದೈವದ ಸೇವೆಗಳು ನಡೆಯಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಮನದ ಕೋರಿಕೆಗಳನ್ನು ಪ್ರಾರ್ಥನೆ ಮಾಡಿ ಹರಕೆ ಒಪ್ಪಿಸಿ ದೈವದ ಗಂಧ ಪ್ರಸಾದ ಸ್ವೀಕಾರ ಮಾಡಿದರು. ಕ್ಷೇತ್ರದಲ್ಲಿ ನಡೆಯುವ ಮಹಾ ಅನ್ನ ಸಂತರ್ಪಣೆ ಕಾರ್ಯದಲ್ಲಿ 15000 ಕ್ಕೂ ಮಿಕ್ಕಿ ಭಕ್ತರು ಅನ್ನ ಪ್ರಸಾದ ಸ್ವೀಕಾರ ಮಾಡಿ ದೈವದ ಕೃಪೆಗೆ ಪಾತ್ರರದರು.

ಈ ನೇಮೋತ್ಸವಕ್ಕೆ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೋಟ್ಯಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಬೆಳ್ತಂಗಡಿ, ಮಾಜಿ ಶಾಸಕರು ಆದ ಸಂಜೀವ ಗೌಡ ಪುತ್ತೂರು, ಕಿರಣ್ ಚಂದ್ರ ಪುಷ್ಪಗಿರಿ, ಹಾಗೂ ಅನೇಕ ದೈವಸ್ಥಾನ ಮತ್ತು ದೇವಸ್ಥಾನ ದ ಆಡಳಿತದಾರರು ಭಾಗವಹಿಸಿದರು.

Related posts

ಟೆಲಿಗ್ರಾಮ್‌ ಆಪ್‌ ಮೂಲಕ ಹಣ ವರ್ಗಾಹಿಸಿ ಮೋಸ: ಕುವೆಟ್ಟು ನಿವಾಸಿ ನುಪೈಲಾ ರಿಗೆ ರೂ. 6.95 ಲಕ್ಷ ವಂಚನೆ

Suddi Udaya

ತಣ್ಣೀರುಪಂತ: ಅವಿವಾಹಿತ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಮಳೆಯ ರಭಸಕ್ಕೆ ಕಣಿಯಾಗಿ ಮಾರ್ಪಾಡುಗೊಂಡ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಕಾಲುದಾರಿ: ಕನ್ಯಾಡಿ, ಧರ್ಮಸ್ಥಳ, ಉಜಿರೆಗೆ ಹೋಗುವ ಈ ಕಾಲುದಾರಿಯ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

Suddi Udaya

ಡಾ| ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

Suddi Udaya

ಉಜಿರೆ ಖಲೀಫಾ ಜುಮಾ ಮಸೀದಿ ಹಾಗೂ ಅಲ್ ಬದ್ರಿಯಾ ಅರೇಬಿಕ್ ಮದರಸ ಕಮಿಟಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ 25 ವಿದ್ಯಾರ್ಥಿಗಳು ಉತ್ತೀರ್ಣ

Suddi Udaya
error: Content is protected !!