September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಡಾ| ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

ಉರುವಾಲು : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಮುಂಬರುವ ಜನ್ಮದಿನದ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತ್, ತಾಲೂಕು ಭಜನಾ ಪರಿಷತ್ತು ಗುರುವಾಯನಕೆರೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಮತ್ತು ಪ್ರಗತಿ ಬಂಧು ಒಕ್ಕೂಟ ಉರುವಾಲು ಇವುಗಳ ಸಹಕಾರದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸದಾ ಮನಃಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಕ್ತಿಯನ್ನು ನೀಡುವಂತೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಮತ್ತು ಭಜನೆಯನ್ನು ಮಾಡಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಕಾರ್ತಿಕ್ ಹೆಗ್ಗಡೆಯವರು ಪೂಜೆಯನ್ನು ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೋಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಈಶ್ವರ ಗೌಡ ,ಕಾರ್ಯದರ್ಶಿ ಆಶಾ, ಕುಣಿತ ಭಜನೆಯ ತರಬೇತಿದಾರರಾದ ನಾಗೇಶ್ ನೆರಿಯ, ಧ.ಗ್ರಾ.ಯೋ.ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ, ಭಜನಾ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ಪ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಜಲಜಾಕ್ಷಿ, ಭಜನಾ ಮಂಡಳಿ ಸದಸ್ಯ ರಾದ ಗಗನ್ ಕುಮಾರ್ , ಸುಪ್ರೀತ್ ನಾಯ್ಕ, ಚರಣ್, ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯ ಗಣೇಶ ಗೌಡ ಬನಾರಿ, ವಿಘ್ನೇಶ್ವರ ಭಜನಾ ಮಂಡಳಿ ಸದಸ್ಯ ಪ್ರದೀಪ್ ನಾಯ್ಕ ಆನಡ್ಕ, ಸ್ವಸಹಾಯ ಸಂಘದ ಸದಸ್ಯರು, ದೇವಸ್ಥಾನ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ಭಜಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಮೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಬಿಲ್ ವಸೂಲಾತಿ ಅಭಿಯಾನ

Suddi Udaya

ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಎಸ್ ಐಟಿ ವಿಚಾರಣೆಗೆ ಹಾಜರು

Suddi Udaya

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ 2.50ಲಕ್ಷ ಹಣ ಪತ್ತೆ

Suddi Udaya

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಮತದಾರರ ಚೇತನ ಅಭಿಯಾನದ ಪ್ರಯುಕ್ತ ಬಿ.ಎಲ್. ಎ. – 2 ಗಳ ಕಾರ್ಯಾಗಾರ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ : ಸ್ಟಾರ್ ಲೈನ್ ಶಾಲಾ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!