25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾ ಸಂಚಾಲಕ ವಂ. ಫಾ. ವಿನೋದ್ ಮಸ್ಕರೇನ್ಹಸ್ ಮಾತನಾಡಿ ಜಾತಿ, ಧರ್ಮ ಭೇದಭಾವವಿಲ್ಲದೇ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು. ನಮ್ಮ ಭಾರತ ಸಂವಿಧಾನದಲ್ಲಿ ಹಕ್ಕುಗಳ ಬಗ್ಗೆ ಸವಿಸ್ತಾರವಾಗಿ ನಮಗೆ ತಿಳಿಸಲ್ಪಟ್ಟಿದೆ, ಯಾವ ರೀತಿಯಲ್ಲಿ ನಾವು ಹಕ್ಕುಗಳನ್ನು ಪಡೆಯಬಹುದು ಮತ್ತು ಸಂವಿಧಾನವನ್ನು ಪಾಲಿಸಬಹುದು ಎಂದು ತಿಳಿಸಿದರು. ಎಲ್ಲಾ ರಾಜ್ಯಗಳಲ್ಲಿ ಗಣರಾಜ್ಯೋತ್ಸವನ್ನು ಆಚರಿಸಿ ಸಂಭ್ರಮಿಸುತ್ತೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಭಾಷೆ, ಆಚರಣೆ, ಊಟದ ಪದ್ದತಿ ಬೇರೆ ಬೇರೆ ಇದ್ದರೂ ನಾವು ಒಂದೇ ಎಂಬುದನ್ನು ಕಾಣಬಹುದು. ಅದೇ ರೀತಿ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ಒಳ್ಳೆ ರೀತಿಯಲ್ಲಿ ನಿಭಾಯಿಸಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳು, ನಾವೆಲ್ಲ ಒಟ್ಟಿಗೆ ಬೆರೆತು ಉತ್ತಮ ನಾಗರಿಕರಾಗೋಣ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಂವಿಧಾನದ ಪೀಠಿಕೆಯ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದಿವ್ಯ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ವಾಣಿ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ

Suddi Udaya

ಯುಗಳ ಮುನಿಶ್ರೀಗಳ ದೀಕ್ಷಾ ಮಹೋತ್ಸವದ ರಜತ ಸಂಭ್ರಮ ಬೆಳಿಗ್ಗೆ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

Suddi Udaya

ಕರಾಟೆ ಚಾಂಪಿಯನ್ ಶಿಪ್ : ಬೆಳ್ತಂಗಡಿಯ ಶ್ರೇಯಸ್ ಕುಮಿಟೆಯಲ್ಲಿ ಪ್ರಥಮ ಸ್ಥಾನ

Suddi Udaya

ಉಪ್ಪಿನಂಗಡಿ-ಕುಪ್ಪೆಟ್ಟಿ ಹೆದ್ದಾರಿಯಲ್ಲಿ ಮರಣ ಗುಂಡಿಗಳ ತಾಂಡವ: ದುಸ್ತರಗೊಂಡ ಸಂಚಾರ | ವಾಹನ ಸವಾರರಿಗೆ ತೀವ್ರ ಸಂಕಷ್ಟ: ಸುದ್ದಿ ಉದಯ ಜನಧ್ವನಿ

Suddi Udaya

ಮಾ.10: ಶಿರ್ಲಾಲು ಶ್ರೀ ಸತ್ಯಸಾರಮುಪ್ಪಣ್ಯ ದೈವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ರೀಡಾಕೂಟ

Suddi Udaya
error: Content is protected !!