ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

ಉಜಿರೆ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಮತ್ತು ಭಾರತದ ರಕ್ಷಣಾ ಸಚಿವಾಲಯ (MoD) ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ (MoE) ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ “ವೀರ್ ಗಾಥಾ”ಸ್ಪರ್ಧೆಯನ್ನು 3ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.

ಶೌರ್ಯ ಪ್ರಶಸ್ತಿಗಳನ್ನು ಪಡೆದವರ ಶೌರ್ಯ ಮತ್ತು ಶೌರ್ಯದ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಈ ಸ್ಪರ್ಧೆಯನ್ನು ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಧೈರ್ಯ ಮತ್ತು ಪರಿಶ್ರಮದ ಮೌಲ್ಯಗಳನ್ನು ತುಂಬುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದ್ದು, ದೇಶದಲ್ಲಿಯೇ ಆಯ್ಕೆ ಆಗಿರುವ ನೂರು ವಿದ್ಯಾರ್ಥಿಗಳಲ್ಲಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಭಟ್ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆ ಆಗಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು, ರಕ್ಷಣಾ ಸಚಿವರಿಂದ ಸನ್ಮಾನಕ್ಕೆ ಭಾಜನರಾಗಿ ಇಂದು ಶಾಲೆಗೆ
ಹೆಮ್ಮೆಯಿಂದ ಆಗಮಿಸಿದ ವಿದ್ಯಾರ್ಥಿಗೆ ಶಾಲೆಯಲ್ಲಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಾತ್ವಿಕ್ ಭಟ್ ರ ಪೋಷಕರು ಹಾಗೂ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀ ಧನ್ಯಕುಮಾರ್ ಇವರು ಭಾಗಿಯಾಗಿದ್ದರು.

ಶಾಲಾ ಶೈಕ್ಷಣಿಕ ಸಂಯೋಜಕಿ ಸುಮಾ ಶ್ರೀನಾಥ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೃಥ್ವಿ ನಿರೂಪಿಸಿ, ಶಿಕ್ಷಕಿ ಶಾಂಟಿ ಜಾರ್ಜ್ ಸ್ವಾಗತಿಸಿದರು.

Related posts

ಕುಕ್ಕೇಡಿ ಸ್ಫೋಟ ಪ್ರಕರಣ: ಮೃತ ಕುಟುಂಬಕ್ಕೆ ಬೆಳ್ತಂಗಡಿ ಕೆಎಸ್ಎಂಸಿಎ ಯಿಂದ ಸಹಾಯ ಹಸ್ತ

Suddi Udaya

ಮರೋಡಿ ಕ್ಷೇತ್ರ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Suddi Udaya

ಲಯನ್ಸ್ ಬೆಳ್ತಂಗಡಿ ವತಿಯಿಂದ “ಡ್ರಗ್ಸ್ ಮುಕ್ತ ಬೆಳ್ತಂಗಡಿ” ಅಭಿಯಾನದ ಕರಪತ್ರ ಅನಾವರಣ

Suddi Udaya

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಸುಲ್ಕೇರಿಗೆ ಭೇಟಿ

Suddi Udaya

ಕಲ್ಮಂಜ: ಪುರುಷೋತ್ತಮ ನಾಯ್ಕ ರವರ ಮನೆಯಲ್ಲಿ ಬೃಹದಾಕಾರದ ಕಾಳಿಂಗ ಸರ್ಪ ಪತ್ತೆ

Suddi Udaya

ಕೊಕ್ಕಡ: ರಾಮ ಸೇವಾ ಮಂದಿರದ ಪಾಕಶಾಲೆಯ ಕಾಮಗಾರಿಗೆ ರಾಘವೇಂದ್ರ ನಾಯಕ್ ಬರ್ಗುಳ ರಿಂದ ರೂ. 1 ಲಕ್ಷ ದೇಣಿಗೆ

Suddi Udaya
error: Content is protected !!