ಉಜಿರೆ: ಶ್ರೀ ಸಾಯಿ ಹೋಟೆಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದಿಂದ ಹೋಟೆಲ್ ಮಾಲೀಕರು ಅಪಾರ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಉಜಿರೆ ಉಜಿರೆ ವಾಣಿಜ್ಯ ಮತ್ತು ಕೈಗರಿಕಾ ಸಂಘದ ವತಿಯಿಂದ ಮಾನವೀಯತೆ ನೆಲೆಯಲ್ಲಿ ಸಹಾಯಧನ ನೀಡಲಾಯಿತು.

ವರ್ತಕರ ಸಹಕಾರದಿಂದ ಸಂಗ್ರಹವಾದ ಒಟ್ಟು ರೂ. 50,000 ಮೊತ್ತದ ಚೆಕ್ ಅನ್ನು ಸಂಘದ ಗೌರವ ಅಧ್ಯಕ್ಷರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರ ಮುಖಾಂತರ ಹಸ್ತಾಂತರಿಸಲಾಯಿತು. ಚೆಕ್ ಸ್ವೀಕರಿಸಿದ ಸಾಯಿ ಹೋಟೆಲ್ ಮಾಲೀಕರು ಸಂಘದ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಡೆದ ಸಭೆಯ ಸ್ವಾಗತವನ್ನು ಕಾರ್ಯದರ್ಶಿ ಅಬ್ಬುಬಕರ್* ಅವರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್.* ಅವರು, ಎಲ್ಲಾ ವರ್ತಕರು ಸಂಘದ ಸದಸ್ಯತ್ವ ಪಡೆಯಬೇಕು, ಆಗ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.
ಸದಸ್ಯರಲ್ಲದಿದ್ದರೂ ಈ ಬಾರಿ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಮಾತ್ರ ನಿಯಮಾವಳಿ ಪ್ರಕಾರ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನ ನಡೆಸಲು ಹಾಗೂ *2027 ರಿಂದ ಸದಸ್ಯತ್ವ ಶುಲ್ಕವನ್ನು ರೂ. 500/- ಎಂದು ನಿಗದಿಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಉಪಸ್ಥಿತರಿದ್ದರು.













