ಚಾರ್ಮಾಡಿ: ಶ್ರೀ ಕೃಷ್ಣ ಕುಂಬಾರರ ಗೆಳೆಯರ ಬಳಗ ಚಾರ್ಮಾಡಿ ವಲಯ ಇವರ ವತಿಯಿಂದ ಸ್ವಜಾತಿ ಬಾಂಧವರ ಮಾಗಣೆ ಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ (7+1) ಮುಕ್ತ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಟ ಹಾಗೂ ನೃತ್ಯ ಸ್ಪರ್ಧೆಯು ಜ.25ರಂದು ನಡೆಯಿತು.

ಪಂದ್ಯಾಟ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಜನ್ ಶ್ರೀ ಕುಂಬಾರರ ಸಂಘ ವಿವೇಕಾನಂದ ನಗರ, ಗಾಂಧಿನಗರ ಕಕ್ಕೆಜಾಲು, ಪುತ್ರಬೈಲು, ಮೇಲಿನ ಕೊಪ್ಪ ಲಾಯಿಲದ ಸದಸ್ಯರು ಮೂರು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡರು.