ಬೆಳ್ತಂಗಡಿ: ಶ್ರೀ ಗುರು ಸಾನಿಧ್ಯ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿರುವ ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿಯ ಉದ್ಘಾಟನೆಯು ಜ. 27ರಂದು ನಡೆಯಿತು.
ಸ್ಥಳಾಂತರಗೊಂಡ ಶಾಖೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಮಾತನಾಡಿ ಶ್ರೀರಾಮ್ ಪೈನಾನ್ಸ್ ಆರ್ಥಿಕ ಶಿಸ್ತಿನೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಶ್ರೀರಾಮನ ಹೆಸರಿನಲ್ಲಿರುವ ಈ ಸಂಸ್ಥೆ ಒಂದು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿ ಹಲವಾರು ಕುಟುಂಬಗಳಿಗೆ ಶಕ್ತಿ ತುಂಬಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್‌ನ ಝೋನಲ್ ಹೆಡ್ ಶರಚ್ಚಂದ್ರ ಭಟ್, ಕಾಕುಂಜೆ ನೆರವೇರಿಸಿ ಶ್ರೀರಾಮ್ ಪೈನಾನ್ಸ್ ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಮ್ ಮಾತನಾಡಿ ಶ್ರೀರಾಮ್ ಫೈನಾನ್ಸ್ ಬೆಳ್ತಂಗಡಿಯಲ್ಲಿ ಸುಮಾರು 50 ಜನರಿಗೆ ಉದ್ಯೋಗ ಕಲ್ಪಿಸಿದೆ.ಹೆಣ್ಮಕ್ಕಳ ಸಬಲೀಕರಣದಿಂದ ಈ ದೇಶ ಬಲಿಷ್ಠವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಝೋನಲ್ ಕಲೆಕ್ಷನ್ ಹೆಡ್ ಎಸ್.ಎಫ್.ಎಲ್ ನಾಗರಾಜ್, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ,ಬಾರ್ ಅಸೋಷಿಯೇಷನ್,ಬೆಳ್ತಂಗಡಿ ಇದರ ಅಧ್ಯಕ್ಷರಾದ ವಸಂತ ಮರಕಡ, ಬೆಳ್ತಂಗಡಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಝೋನಲ್ ಪ್ರೊಡಕ್ಟ್ ಹೆಡ್, ಎಸ್.ಎಫ್.ಎಲ್ ಚಂದ್ರಹಾಸ್ ಆಳ್ವ, ರೀಜನಲ್ ಬ್ಯೂಸಿನೆಸ್ ಹೆಡ್ ಎಸ್.ಎಫ್.ಎಲ್ ಗಣಪತಿ ನಾಯ್ಕ. ರೀಜನಲ್ ಬ್ಯೂಸಿನೆಸ್ ಹೆಡ್ ಟಿ.ಪಿ.ಜಿ., ಶ್ರೀ ಸುರೇಶ್ ಶೆಟ್ಟಿ, ರೀಜನಲ್ ಬ್ಯುಸಿನೆಸ್ ಹೆಡ್ ಗ್ರೀನ್ ಫೈನಾನ್ಸ್ ದಿನೇಶ್ ನಾಯ್ಕ್, ಬ್ರಾಂಚ್ ಮ್ಯಾನೇಜರ್ ಶರತ್ ಕುಮಾರ್, ಬ್ರಾಂಚ್ ಮ್ಯಾನೇಜರ್ ಟಿಪಿಜಿ ಪುಷ್ಪರಾಜ್, ಕಲೆಕ್ಷನ್ ಮ್ಯಾನೇಜರ್ ರಿಜೇಶ್ ಕುಮಾರ್, ಕಲೆಕ್ಷನ್ ಮ್ಯಾನೇಜರ್ ಸುಭಾಶ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಕೀಲರಾದ ಶಿವಯ್ಯ ಹಾಗೂ ಚಿದಾನಂದ ಬಿ ಇವರನ್ನು ಗೌರವಿಸಲಾಯಿತು.
ಸಚಿನ್ ಕಾರ್ಯಕ್ರಮ ನಿರೂಪಿಸಿದರು,ವಂದಿಸಿದರು.