36.4 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಕಾಜೂರು ಉರೂಸ್ ಗೆ ಆಗಮಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ: ಅಬ್ದುಲ್ ಕರೀಮ್ ಗೇರುಕಟ್ಟೆ

ಬೆಳ್ತಂಗಡಿ ತಾಲೂಕಿನ ಕಾಜೂರು ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ನ ವಾರ್ಷಿಕ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಜ.30 ರಂದು ರಾತ್ರಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ದ.ಕ.ಜಿಲ್ಲಾ ಸಂಯುಕ್ತ ಜಮಾಅತಿನ ಖಾಝಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ರವರು ಆಗಮಿಸಲಿದ್ದಾರೆ.

ಇವರನ್ನು ಬೆಳ್ತಂಗಡಿಯ ಲಾಯಿಲದಿಂದ ರಾತ್ರಿ 7 ಗಂಟೆಗೆ ವಾಹನ ಜಾಥಾದ ಮೂಲಕ ಸಂದಲ್ ಮೆರವಣಿಗೆಯಲ್ಲಿ ಸ್ವಾಗತಿಸುವುದು. ತಾಲೂಕಿನಲ್ಲಿರುವ ಎಲ್ಲಾ ಮೊಹಲ್ಲಾಗಳ ವಿವಿಧ ಸಮಿತಿಗಳ ಪ್ರತಿನಿಧಿಗಳು, ಜಮಾಅತರು, ಉಲಮಾ ಉಮರಾ ನಾಯಕರು ತಮ್ಮ ವಾಹನದೊಂದಿಗೆ ಶಿಸ್ತುಬದ್ದವಾಗಿ ಜಾಥಾವನ್ನು ಸಂಘಟಿಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಯಾವುದೇ ತೊಂದರೆ ಆಗದೆ ಟ್ರಾಫಿಕ್ ಪೋಲಿಸರೊಂದಿಗೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸರಕಾರದ ದ.ಕ.ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ಮನವಿ ಮಾಡಿಕೊಂಡಿದ್ದಾರೆ.

Related posts

ಬೆಳ್ತಂಗಡಿ ಬಿಜೆಪಿ ಕಚೇರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ – ವಸಂತ ಮರಕಡ ಅಧ್ಯಕ್ಷತೆಯ 2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಮನೆ ಒಂದು ಭಾಗ ಕುಸಿದು ಬಿದ್ದು ಕಳಿಯ ಮುಡಾಯಿಪಲ್ಕೆ ಅಣ್ಣು ರವರಿಗೆ ಗಾಯ

Suddi Udaya

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

Suddi Udaya

ಕಳೆಂಜ ಕ್ರಿಶ್ಚಿಯನ್  ಬ್ರದರ್‍ಸ್ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya

ಮುಂಡಾಜೆ : ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ