37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.4 – 5: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವ

ವೇಣೂರು: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವವು ಫೆ.4 ಮತ್ತು 5 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ತಿಳಿಸಿದ್ದಾರೆ.

ಫೆ.4 ರಂದು ರಾತ್ರಿ ವಾಸ್ತುಪೂಜೆ, ವಾಸ್ತು ಹೋಮ, ದಿಕ್ ಬಲಿ ಹಾಗೂ 10ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಮಹಾಚಂಡಿಕಾಯಾಗ ನಡೆಯಲಿದೆ.

ಫೆ.5 ರಂದು ಬೆಳಿಗ್ಗೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ. ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಶ, ಪಲ್ಲಪೂಜೆ, ಆದಿವಾಸ ಹೋಮ. ಭಜನಾ ಕಾರ್ಯಕ್ರಮ ವಿಶೇಷ ರಂಗಪೂಜೆ ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ ‘ಅನ್ನಸಂತರ್ಪಣೆ’ ಜರುಗಲಿದೆ. ಸಂಜೆ ನವ(9) ಗುಳಿಗಳ ವಿಶೇಷ ಗಗ್ಗರ ಸೇವೆ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ನಂತರ ಮೈಸಂದಾಯ, ದುಗಲಾಯ, ಪಂಜುರ್ಲಿ, ಮಂತ್ರದೇವತೆ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ದೈವಗಳ ಗಗ್ಗರಸೇವೆ ನಡೆಯಲಿದೆ.ಫೆ.6 ರಂದು ಪರಿವಾರ ದೈವಗಳ ಪರ್ವಸೇವೆ ನಡೆಯಲಿದೆ ಎಂದು ತಿಳಿಸಿದರು.

ನವಗುಳಿಗಗಳ ಗಗ್ಗರ ಸೇವೆ ಇಲ್ಲಿನ ವಿಶೇಷ: ಧರ್ಮದರ್ಶಿ ರಮೇಶ್ ಬರ್ಕಜೆ

ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಿಶೇಷವಾಗಿ ನವ(9) ಗುಳಿಗ ದೈವಗಳ ಗಗ್ಗರ ಸೇವೆ ಹಾಗೂ ಪರಿವಾರ ದೈವಗಳ ಗಗ್ಗರ ಸೇವೆ ನಡೆಯಲಿದೆ. ಕ್ಷೇತ್ರದಲ್ಲಿ ಭಕ್ತರಿಗೆ ಎರಡು ದಿನವು ಅನ್ನಸಂತರ್ಪಣೆ ಸೇವೆ ನಡೆಯಲಿದೆ. ಶ್ರೀ ಗಾನಸುರಭಿ ಭಜನಾ ಸಂಕೀರ್ತನಾ ತಂಡ ಉಜಿರೆ ಮತ್ತು ಸಂದೇಶ್ ಮದ್ದಡ್ಕ ಇವರ ವಿದ್ಯಾರ್ಥಿಗಳಿಂದ ಕುಣಿತ ಭಜನಾ ಕಮ್ಮಟೋತ್ಸವ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಉಭಯ ಜಿಲ್ಲಾ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆ. ಊರ ,ಪರವೂರ ಸರ್ವರೂ ಕೂಡ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ತಿಳಿಸಿದರು.

Related posts

ಶಿಶಿಲದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

Suddi Udaya

ಸೌಜನ್ಯ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಎಸ್‌.ಐ.ಟಿ ಅಧಿಕಾರಿಗಳಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

Suddi Udaya

ಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ

Suddi Udaya

ಉಜಿರೆ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ

Suddi Udaya

ಮಡಂತ್ಯಾರು ಮುಖ್ಯರಸ್ತೆಯಲ್ಲಿ ಗುಡ್ಡ ಕುಸಿತ: ಟಾಟಾ ಎಸಿ ವಾಹನ ಜಖಂ; ಅಂಗಡಿಗೆ ಸಂಪೂರ್ಣ ಹಾನಿ

Suddi Udaya

ಧರ್ಮಸ್ಥಳದ ಅಶೋಕನಗರ ಅಭಿವೃದ್ಧಿಗಾಗಿ ರೂ.2.41 ಕೋಟಿ ಅನುದಾನದ ಕಾಮಗಾರಿಗೆ ಶಂಕು ಸ್ಥಾಪನೆ

Suddi Udaya
error: Content is protected !!