23.6 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಸಹಕಾರಿ ಸಂಘದ ಚುನಾವಣೆ: ಹೈಕೋರ್ಟು ತೀರ್ಪು ಪ್ರಕಟ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ನಿರ್ದೇಶಕ ಸ್ಥಾನ 7 ರಿಂದ 9 ಕ್ಕೆ ಏರಿಕೆ

ಬೆಳ್ತಂಗಡಿ: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಡಿ.1 ರಂದು ನಡೆದ ಚುನಾವಣೆಯಲ್ಲಿ ತಡೆ ಹಿಡಿಯಲಾದ ಫಲಿತಾಂಶದ ಬಗ್ಗೆ ಹೈಕೋರ್ಟುನ ಅಂತಿಮ ತೀರ್ಪು ಪ್ರಕಟಗೊಂಡಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ನಿರ್ದೇಶಕರ ಸ್ಥಾನ 7ರಿಂದ 9 ಕ್ಕೇರಿದೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ 7 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 3 ಮಂದಿ ಅಭ್ಯರ್ಥಿಗಳು ಈ ಚುನಾಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಜಯ ಸಾಧಿಸಿದ್ದರು. ಆದರೆ ಇಬ್ಬರು ಅಭ್ಯರ್ಥಿಗಳ ಫಲಿತಾಂಶದ ಬಗ್ಗೆ ಹೈಕೋರ್ಟಿನಲ್ಲಿ ರಿಟ್‌ಪಿಟಿಷನ್ ಇದ್ದುದರಿಂದ ಚುನಾವಣಾಧಿಕಾರಿಗಳು ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವನ್ನು ಘೋಷಣೆ ಮಾಡದೆ ತಡೆ ಹಿಡಿದಿದ್ದರು. ಸಹಕಾರಿ ಸಂಘದ ಎರಡು ಮಹಾಸಭೆಗೆ ಗೈರು ಹಾಜರಾಗುವ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ.

ಈ ಹಿನ್ನಲೆಯಲ್ಲಿ ಅವಕಾಶ ಕಳೆದುಕೊಂಡ 139 ಮಂದಿ ಸದಸ್ಯರು ಹೈಕೋರ್ಟಿನಲ್ಲಿ ಸಲ್ಲಿಸಿದ ರಿಟ್‌ಪಿಟಿಷನ್‌ನಂತೆ ನ್ಯಾಯಾಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು. ಮತದಾನಕ್ಕೆ ಅನುಮತಿ ಪಡೆದುಕೊಂಡ 139 ಮಂದಿಯಲ್ಲಿ 100 ಮಂದಿ ಮತ ಚಲಾಯಿಸಿದ್ದು ಅದನ್ನು ಪ್ರತ್ಯೇಕವಾಗಿ ಎಣಿಕೆ ಮಾಡಿ ಇಡಲಾಗಿತ್ತು.


ಇದೀಗ ಹೈಕೋರ್ಟು ಅಂತಿಮ ಆದೇಶವನ್ನು ಮಾಡಿದ್ದು, ಈಗಾಗಲೇ ಕೋರ್ಟಿನಿಂದ ಅನುಮತಿ ಪಡೆದು ಮತ ಚಲಾಯಿಸಿದ ಸದಸ್ಯರ ಮತ ಅಸಿಂಧು ಎಂದು ತೀರ್ಪು ಬಂದಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಇಬ್ಬರು ನಿರ್ದೆಶಕರು ಚುನಾಯಿತರಾಗಿದ್ದು, ನಿರ್ದೇಶಕರ ಸ್ಥಾನ 7 ರಿಂದ 9 ಕ್ಕೇರಿದೆ. ಹೈಕೋರ್ಟು ನೀಡಿದ ಆದೇಶ ಬಂದ ಕೂಡಲೇ ಚುನಾವಣಾಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ.

ಚುನಾಯಿತರಾದ ನಿರ್ದೇಶಕರು: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ನಿರ್ದೇಶಕರು ಗೋಪಾಲಕೃಷ್ಣ (716 ಮತ), ಸುರೇಶ್ ಎಸ್ (102 ಮತ), ಮಹಾಬಲ ಕೆ. (696 ಮತ), ಧನಲಕ್ಷ್ಮಿ ಚಂದ್ರಶೇಖರ್ (700 ಮತ), ಕಾಂತಪ್ಪ ಗೌಡ (677 ಮತ), ಕಿಶೋರ್ ಕುಮಾರ್ (740 ಮತ) ಜೋಯಲ್ ಮೆಂಡೋನ್ಸ (617 ಮತ), ಅನಿತಾ ಪ್ರಿಯಾ ಲೋಬೋ (609 ಮತ) ಹಾಗೂ ಗಣೇಶ್ ಮೂಲ್ಯ (614), ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ನಿಕಪೂರ್ವ ಅಧ್ಯಕ್ಷ ಅರವಿಂದ ಜೈನ್ (785 ಮತ), ಪದ್ಮನಾಭ ಸಾಲಿಯಾನ್ ಮಾಲಾಡಿ (627 ಮತ), ಕುಮಾರ ನಾಯ್ಕ (709 ಮತ) ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಪರವಾಗಿ ವಕೀಲ ದೇವಿಪ್ರಸಾದ್ ಶೆಟ್ಟಿ ವಾದಿಸಿದ್ದರು. ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಂಗ್ರೆಸ್ ಬೆಂಬಲಿತರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Related posts

ಎಳನೀರಿನಲ್ಲಿ ಮೊಟ್ಟಮೊದಲ ಸಾಹಿತ್ಯ ಕಾರ್ಯಕ್ರಮ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಗುರುವಾಯನಕೆರೆ ಸ. ಹಿ. ಪ್ರಾ. ಶಾಲೆಗೆ ಪುತ್ತೂರು ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಭೇಟಿ

Suddi Udaya

ಅಂಡಿಂಜೆ : ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya

ಧರ್ಮಸ್ಥಳ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಹಾಗೂ ಸೆಲ್ಕೋ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಸಮೃದ್ಧಿ ಸಂತೃಪ್ತಿ ಸಬಲೀಕರಣ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya
error: Content is protected !!