25.7 C
ಪುತ್ತೂರು, ಬೆಳ್ತಂಗಡಿ
March 7, 2026
ಧಾರ್ಮಿಕ

ಕೊಕ್ಕಡ ಬಡೆಕ್ಕರ ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯರಿಗೆ ತಿರುವನಂತ ಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾ ಪ್ರಧಾನ ಅರ್ಚಕ ಗೌರವ

ಬೆಳ್ತಂಗಡಿ: ಭಾರತದ ಅತೀ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತ ಪುರ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪ್ರಧಾನ ಮಹತ್ತರವಾದ ಗೌರವ ಇರುವ ಮಹಾ ಪ್ರಧಾನ ಅರ್ಚಕ ಸ್ಥಾನ( ಪೆರಿಯ ನಂಬಿ) ( ಕೊಡೆಅರ್ಚಕರಾಗಿ ಸೇವೆ ಸಲ್ಲಿಸಲು ಭಾಗ್ಯ ದೊರಕುವುದು ಅಂದ್ರೆ ವೈಕುಂಠದಲ್ಲಿ ದೇವರನ್ನ ಸ್ವತಃ ಪೂಜಿಸಿದ ಗರಿಮೆ.ಈ ಪ್ರಧಾನ ಅರ್ಚಕ ಸ್ಥಾನ ಲಭಿಸಬೇಕಾದರೆ ಅದು ಅದೆಷ್ಟೋ ವರ್ಷ ಕೆಳಗಿನ ಪೂಜಾ ಅರ್ಚಕ ಸ್ಥಾನಗಳನ್ನ ಪೂರೈಸಿ ನಂತರ ಈ ಹುದ್ದೆಯ ಭಾಗ್ಯ ದೊರೆಯುವುದು ವಾಡಿಕೆ. ಅದರಲ್ಲೂ ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ ( ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ.ಈ ಮಹಾ ಅರ್ಚಕ ಸ್ಥಾನವನ್ನ ಈವರೆಗೆ ಅತೀ ಸಣ್ಣ ವಯಸ್ಸಿನಲ್ಲಿ ಪಡೆದ ಯಾವುದೇ ನಿದರ್ಶನ ತಿಳಿದಂತೆ ಇಲ್ಲ.
ಕಳೆದ ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡ ಕೊಕ್ಕಡದ ದಿ. ಸುಬ್ರಾಯ ತೋಡ್ತಿಲ್ಲಾಯರ ಮಗ ಬಡೆಕ್ಕರ ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯ (45 ವ). ಇವರಿಗೆ ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹತ್ತರವಾದ ಗೌರವ ಇರುವ ಮಹಾ ಪ್ರಧಾನ ಅರ್ಚಕ ಸ್ಥಾನ( ಪೆರಿಯ ನಂಬಿ) ( ಕೊಡೆ = ಛತ್ರಿ ಮರ್ಯಾದೆ) ಪ್ರಾಪ್ತಿಯಾಗಿರುವುದು ಇತಿಹಾಸದ ಒಂದು ದೊಡ್ಡ ಮೈಲುಗಲ್ಲು. ಇದರ ಕೀರ್ತಿ ಇವರ ಹುಟ್ಟೂರಾದ ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಮತ್ತು ವಿಶ್ವವಿಖ್ಯಾತ ನಂ.1 ಶ್ರೀಮಂತ ದೇವಳದ ಮಹಾಪ್ರಧಾನ ಅರ್ಚಕ ಹುದ್ದೆಯು ಕೇರಳದ ನೆರೆಯ ಕರ್ನಾಟಕ ರಾಜ್ಯಕ್ಕೂ ಒಂದು ಅತೀ ಹೆಮ್ಮೆಯ ವಿಷಯವಾಗಿದೆ. ಊರಿನ ಓರ್ವ ಅರ್ಚಕರು ಇಂದು ಅತ್ಯಲ್ಪ ಅವಧಿಯಲ್ಲೇ ಇಂತಹ ಮಹಾನ್ ಹುದ್ದೆಗೆ ನಿಯುಕ್ತಿಗೊಂಡಿರುವುದು ನಮ್ಮೂರಿಗೂ ,ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಇಲ್ಲೀ ತನಕದ ಇತಿಹಾಸದಲ್ಲಿ ಈ ಮಹಾ ಹುದ್ದೆಯನ್ನ ನಿರ್ವಹಿಸಿದವರು ನಮ್ಮೂರಿನ ಹಲವರು ಇದ್ದಾರಾದರೂ ಜೀವನದ ಸಂಧ್ಯಾಕಾಲದಲ್ಲಿ ಈ ಯೋಗ ಅವರಿಗೆಲ್ಲ ಸಿಕ್ಕಿರುವುದಾಗಿದೆ. ಈಗದ ವಿಶೇಷ ಏನೆಂದರೆ ಪ್ರಧಾನ ಅರ್ಚಕ ಸ್ಥಾನಕ್ಕೆ ಸೇರಿದ ಆರುತಿಂಗಳಲ್ಲೇ ಈ ಮಹಾಪ್ರಧಾನ ಅರ್ಚಕ ಸ್ಥಾನ ದ ಸುಯೋಗ ಒದಗಿದ ಅತ್ಯಂತ ಕಿರಿಯ ವಯಸ್ಸಿನ ಮಹಾಪ್ರಧಾನ ಅರ್ಚಕರು( ಪೆರಿಯ ನಂಬಿ) ಶ್ರೀ ಸತ್ಯನಾರಾಯಣ ತೋಡ್ತಿಲ್ಲಾಯರು ಆಗಿದ್ದಾರೆ.
ಜನವರಿ 30. 2025 ರಂದು ಈ ಮಹಾನ್ ಹುದ್ದೆ ಇವರಿಗೆ ಪ್ರಾಪ್ತವಾಗಲಿದೆ. ಜ. 30ರಿಂದ ಈ ಹಿರಿಯ ಜವಾಬ್ದಾರಿ ಅವರ ಹೆಗಲಿಗೇರಲಿದೆ.

Related posts

ಮಚ್ಚಿನ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ ) ಬಳ್ಳಮಂಜ ಇದರ ವತಿಯಿಂದ 30 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ರಾಮ ಭಕ್ತರಿಂದ ರಾಮೋತ್ಸವ ಸಂಭ್ರಮ: ಅಯೋಧ್ಯ ಕರ ಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮೂವರು ಕಲಾಸಾಧಕರಿಗೆ ರಂಗ ಸಮ್ಮಾನ್ ಗೌರವ

Suddi Udaya

ಮಾ.4-6: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ- ಹರೀಶ್ ಪೂಂಜ ಪತ್ರಿಕಾಗೋಷ್ಠಿ

Suddi Udaya

ಡಿ.8-12: ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ

Suddi Udaya

ಸೆ.7: ಕೊಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya
error: Content is protected !!