23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಲಂತಿಲ ಗ್ರಾ.ಪಂ. ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

ಇಲಂತಿಲ: 2024 -25ನೇ ಸಾಲಿನ ವಿಕಲ ಚೇತನ ವಿಶೇಷ ಗ್ರಾಮ ಸಭೆಯು ಸರ್ಕಾರದ ಆದೇಶದಂತೆ ಜ. 30 ರಂದು ಇಲಂತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಪಂಚಾಯತ್ ಅಧ್ಯಕ್ಷರು ಹಾಗೂ ವೇದಿಕೆಯಲ್ಲಿರುವ ಎಲ್ಲಾ ಗಣ್ಯರುಗಳ ಸಮ್ಮುಖದಲ್ಲಿ ಸಭೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಗಾಟಿಸಲಾಯಿತು. 2024-25ನೇ ಸಾಲಿನ ವಿಕಲಚೇತನರ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ರಾಧಿಕಾ ವಾಚಿಸಿದರು.


ವಿಕಲಚೇತನರಿಗೆ ವಿಕಲಚೇತನ ಇಲಾಖೆ ಹಾಗೂ ಎಲ್ಲಾ ಇಲಾಖೆಗಳಿಂದ ಸಿಗುವ ಸರಕಾರದ ಸೌಲಭ್ಯದ ಸಮಗ್ರ ಮಾಹಿತಿಯನ್ನು ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಜೋನ್‌ ಬ್ಯಾಪ್ಟಿಸ್ಟ್ ಡಿಸೋಜ‌ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತಿಯಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಪ್ರಸಕ್ತ ಸಾಲಿನಲ್ಲಿ ಐದು ಜನ ವಿಕಲಚೇತನರಿಗೆ ವೈದ್ಯಕೀಯ ವೆಚ್ಚದ ಸಹಾಯಧನದ ಚೆಕ್ಕನ್ನು ಹಸ್ತಂತರಿಸಲಾಯಿತು,


ಎರಡು ಜನ ವಿಕಲಚೇತನರಿಗೆ ಕುಡಿಯುವ ನೀರಿನ ಟ್ಯಾಂಕ್ ಖರೀದಿಗೆ ಸಹಾಯಧನದ ಚೆಕ್ ವಿತರಿಸಲಾಯಿತು ಹಾಗೂ ಒಬ್ಬರಿಗೆ ವಿಶೇಷ ಶೌಚಾಲಯ ನಿರ್ಮಾಣಕ್ಕೆ ಸಹಾಯಧನದ ಚೆಕ್‌ ಹಸ್ತಾಂತರಿಸಲಾಯಿತು.


ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ ಹೆಚ್ ಒ ಶ್ರೀಮತಿ ಮಧುಶ್ರೀ ಇವರು ವಿಕಲಚೇತನರಿಗೆ ಹಾಗೂ ಎಂಡೋಪೀಡಿತರಿಗೆ ಆರೋಗ್ಯ ಇಲಾಖೆಯಲ್ಲಿ ಇರುವ ಸೇವೆಯ ಬಗ್ಗೆ ಮಾಹಿತಿಯನ್ನು ನೀಡಿದರು.


ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಆರೋಗ್ಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ನಡೆಸಲಾಯಿತು.
ಪಂಚಾಯತ್ ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

Suddi Udaya

ಶಿಶಿಲ ಗಿರಿಜನ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ನಂದಿನಿ ಹಾಗೂ ನಿರ್ಮಲ ಸ್ತ್ರೀ ಶಕ್ತಿ ಸದಸ್ಯರಿಂದ ಶ್ರಮದಾನ ಹಾಗೂ ಪೌಷ್ಟಿಕ ಕೈತೋಟ ನಿರ್ಮಾಣ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕುಕ್ಕೇಡಿ: ಚಿರತೆ ದಾಳಿಗೆ ಹಸು ಬಲಿ

Suddi Udaya

ಬ್ರೈನ್ ಹ್ಯಾಮರೇಜ್ ನಿಂದ ಬಳಲುತ್ತಿರುವ ಸುಳ್ಯದ ಸಂಧ್ಯಾ ರವರ ಚಿಕಿತ್ಸೆಗೆ ನೆರವಾಗಿ

Suddi Udaya
error: Content is protected !!