April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಕೊಯ್ಯೂರು : ಕೊಯ್ಯೂರು ಪಂಚದುರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ 2023 – 24 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಗ್ರಾಮ ಪಂಚಾಯತ್ ಆವರಣದಲ್ಲಿ ಜ.30 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ದಯಾಮಣಿ‌, ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಪಿ , ಪಂಚಾಯತ್ ಅಭಿವೃದ್ಧಿ ‌ಅಧಿಕಾರಿ ಪ್ರಕಾಶ್ ಎಸ್ , ಪಂಚಾಯತ್ ಉಪಾಧ್ಯಕ್ಷ ಹರೀಶ್ ರವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಎಮ್ ಬಿಕೆ ಶುಭಲಕ್ಷ್ಮಿ ವಾರ್ಷಿಕ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು. ವಲಯ ಮೇಲ್ವಿಚಾರಕ ಜಯಾನಂದ್ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಗಳ ಕುರಿತು ಮಾಹಿತಿಯನ್ನು ನೀಡಿದರು. ಒಕ್ಕೂಟದ ಬೆಳಕು‌ ಸಂಜೀವಿನಿ‌ ಸಂಘದ ಸದಸ್ಯೆ ಶ್ರೀಮತಿ ಪುಷ್ಪಾವತಿ ಇವರ ಕಲ್ಪಾಮ್ರತ ಕೊಬ್ಬರಿ‌ ಎಣ್ಣೆಯನ್ನು ಲಾಂಚ್‌‌ ಮಾಡಲಾಯಿತು. ಒಕ್ಕೂಟದಿಂದ ಸಿಐಫ್ ಪಡೆದು ಉತ್ತಮ ಜೀವನನೋಪಾಯ ಚಟುವಟಿಕೆಯನ್ನು ನಡೆಸುವ ಸಂಘದ ಸದಸ್ಯೆ ವಿಜಯ ಹಾಗೂ ಉತ್ತಮ 2 ಸಂಘಗಳನ್ನು‌ ಗುರುತಿಸಿ ಒಕ್ಕೂಟದ ವತಿಯಿಂದ ಸ್ಮರಣಿಕೆ ನೀಡಲಾಯಿತು .

ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಳಿಕ‌ ಪದಗ್ರಹಣವನ್ನು ನಡೆಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಯಾನಂದ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬೀಳ್ಕೊಟ್ಟ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ, ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ತರಕಾರಿಗಳು, ಅಕ್ಕಿರೊಟ್ಟಿ, ಚಕ್ಕುಲಿ, ಉಪ್ಪಿನಕಾಯಿ, ಕೊಬ್ಬರಿ‌ ಎಣ್ಣೆಯನ್ನು ಮಾರಾಟ ಮಾಡಲಾಯಿತು. ಶ್ರೀಮತಿ ಶ್ರುತಿ‌ ಸ್ವಾಗತಿಸಿ , ಧನಲಕ್ಷ್ಮಿ ಸಂಘದ ಸದಸ್ಯೆ ಗೀತಾ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ: ಶ್ರೀ ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ ಶತಮಾನೋತ್ಸವ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya

ತುಮಕೂರಿನಲ್ಲಿ ಹತ್ಯೆಗೀಡಾದ ಬೆಳ್ತಂಗಡಿ ತಾಲೂಕಿನ ನಿವಾಸಿಗಳ ಮನೆಗೆ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್ ಭೇಟಿ

Suddi Udaya

ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದಿಂದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya

ಪುಂಜಾಲಕಟ್ಟೆ- ಪುರಿಯ ಹದಗೆಟ್ಟ ರಸ್ತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya
error: Content is protected !!