September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ.

ಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುವಾಯನಕೆರೆ ಬ್ರಾಂಚ್ ಸಮಿತಿ ಹಾಗೂ ಜುಮ್ಮಾ ಮಸೀದಿ ಗುರುವಾಯನಕೆರೆ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಕುವೆಟ್ಟು ಗ್ರಾಮದ ಪಣೆಜಾಲುನಲ್ಲಿ ನಿರ್ಮಿಸಿದ ಮನೆಯನ್ನು ಬಡ ಮಹಿಳೆ ಜೋಹಾರ ಪಣೆಜಾಲು ಅವರಿಗೆ ಹಸ್ತಾಂತರ ಮಾಡಲಾಯಿತು.

ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ದುವಾ ಆಶಿರ್ವಾದಗೈದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸದಾತ್ ಬಜತ್ತೂರು ಮನೆ ಕೀ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮನೆ ನಿರ್ಮಾಣಕ್ಕೆ ಸಹಕರಿಸಿದ ರಿಯಾಝ್ ಮೇಸ್ತ್ರಿ ಮದ್ದಡ್ಕ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜುಮ್ಮಾ ಮಸೀದಿ ಗುರುವಾಯನಕೆರೆ ಖತೀಬರಾದ ಎ ಕೆ ರಝ ಅಮ್ಜದಿ, ಮಸೀದಿ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ, ಯಾಕೂಬ್ ಮುಸ್ಲಿಯಾರ್, ಹಾಜಿ ಅಬ್ದುಲ್ ರಹಿಮಾನ್ ಸುನ್ನತ್ ಕೆರೆ, ಪಂಚಾಯತ್ ಸದಸ್ಯರಾದ ಮುಸ್ತಾಫ ಜಿ.ಕೆರೆ, ಸುನ್ನತ್ ಕೆರೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಕೀಮ್, ಕಿಲ್ಲೂರು ಜುಮ್ಮಾ ಮಸೀದಿ ಅಧ್ಯಕ್ಷರಾದ ಅಝೀಝ್ ಝುಹ್ರಿ ಉಸ್ತಾದ್, ಉಮರ್ ಮಟನ್, ನಿಸಾರ್ ಕೆ. ಪಿ, ಉಸ್ಮಾನ್ ಬಿ ಬಿ ಎಸ್, ದಾವೂದ್ ಜಿ.ಕೆ, ಕಲಂದರ್ ಬಿ. ಎಚ್, ಅಶ್ರಫ್ ಸುನ್ನತ್ ಕೆರೆ, ನಿಜಾಮ್ ಗೇರುಕಟ್ಟೆ, ಎಸ್‌ಡಿಪಿಐ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.

Related posts

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

Suddi Udaya

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

Suddi Udaya

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹ: ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ: ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ

Suddi Udaya

ನಾಲ್ಕೂರು: ಪುಣ್ಕೆದೊಟ್ಟು ನಾಗಬನದಲ್ಲಿ ಸಂಭ್ರಮದ ನಾಗರ ಪಂಚಮಿ

Suddi Udaya

ನಗರ ಪಂಚಾಯತದ ಒಳಚರಂಡಿಗೆ ಬಿದ್ದ ದನ: ಅಗ್ನಿಶಾಮಕದವರ ಸಹಕಾರದಿಂದ ಮೇಲಕ್ಕೆ

Suddi Udaya
error: Content is protected !!