ಬೆಳ್ತಂಗಡಿ: ಜ. 29 30 31 ರಂದು ಜೈಪುರ್ ನಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ವಾಲಿಬಾಲ್ ಅಮೆಚೂರ್ ಅಸೋಸಿಯೇಷನ್ ವತಿಯಿಂದ ಅಂಡರ್ 18 ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಕೂಟದಲ್ಲಿ ಮಾಜಿ ಶಾಸಕರಾದ ಕೀರ್ತಿಶೇಷ ವಸಂತ ಬಂಗೇರ ಅವರ ಸ್ಟಾಪಕತ್ವದ ಶ್ರೀ ಗುರುದೇವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶಾಂತ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ಬಣಕಲ್ ಮತ್ತಿಕಟ್ಟೆ ಸಂಜೀವ ಮತ್ತು ಸುಮಿತ್ರ ದಂಪತಿಯ ಪುತ್ರ. ಪ್ರಥಮ ಸ್ಥಾನ ಪಡೆದ ಪ್ರಶಾಂತ ಅವರನ್ನು ಶ್ರೀ ಗುರುದೇವ ಕಾಲೇಜಿನ ಆಡಳಿತ ಸಮಿತಿ, ಪ್ರಾಂಶುಪಾಲರು, ಉಪ ಪ್ರಾಂಶು ಪಾಲರು, ಉಪನ್ಯಾಸಕ ವೃಂದ , ಶಾರೀರಿಕ ನಿರ್ದೇಶಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.