ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣ ಗೋಡೆ ಕುಸಿತ: ನೀರಿನ ಪಂಪ್ ಶೆಡ್ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ

ನಾವೂರು : ಜು.6 ರಂದು ಸಂಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರು ಇದರ ಬಲ ಬದಿಯ ಆವರಣಗೋಡೆ , ವಿದ್ಯುತ್ ಕಂಬ, ಹಾಗೂ ಗ್ರಾಮ ಪಂಚಾಯತ್ ನೀರು ಸರಬರಾಜು ಪಂಪ್ ಶೆಡ್ ಬಿದ್ದಿದ್ದು, ದೈವದ ಕಟ್ಟೆ ಕೂಡಾ ಜರಿಯುವ ಹಂತದಲ್ಲಿದೆ.


ದೇವಸ್ಥಾನದ ಬಲಬದಿ ಮನೆಯೊಂದಿದ್ದು ಅವರು ತನ್ನ ಜಾಗವನ್ನು ಇತ್ತೀಚೆಗೆ ಸಮತಟ್ಟುಗೊಳಿಸಿದ್ದರು.ಈ ಸಂಧರ್ಭ ದೇವಸ್ಥಾನದ ಅಧ್ಯಕ್ಷರು ಸಮಸ್ಯೆಯಾಗದಂತೆ ಸಮತಟ್ಟುಗೊಳಿಸುವಂತೆ ಸೂಚಿಸಿದ್ದರು. ದೇವಸ್ಥಾನದ ಜಾಗ ಇವರ ಜಾಗಕ್ಕಿಂತ 15- 20ಅಡಿ ಎತ್ತರದಲ್ಲಿದ್ದು, ಸಮತಟ್ಟು ಮಾಡುವ ವೇಳೆ ನೀರು ಹರಿಯುವ ಕಣಿಯನ್ನು ಕೂಡಾ ತೆಗೆದಿದ್ದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಹಾಗೂ ತಹಶೀಲ್ದಾರಿಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಹಾಗೂ ಮೆಸ್ಕಾಂ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಪಿಲಿಗೂಡು: ಯಾಂತ್ರಡ್ಕದಲ್ಲಿ ಕಳ್ಳತನ: ನಗ‌- ನಗದು ದೋಚಿ ಪರಾರಿಯಾದ ಖದೀಮ

Suddi Udaya

ನಾಳೆ (ಮೇ 7): ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ

Suddi Udaya

ರಾ.ಹೆ. ಲಾಯಿಲ ಬಳಿ ತಿರುವಿನ ಸೂಚನ ಫಲಕ ಕಾಣೆ; ಸುದ್ದಿ ಉದಯ ಜನಧ್ವನಿ

Suddi Udaya

ಬೆಳ್ತಂಗಡಿ: ವಾಹನ ಸಂಚಾರ ಇಂದು ಮಾರ್ಗ ಬದಲಾವಣೆ

Suddi Udaya

ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮದ ಕಚೇರಿ ಉದ್ಘಾಟನೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya
error: Content is protected !!