23.7 C
ಪುತ್ತೂರು, ಬೆಳ್ತಂಗಡಿ
February 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಸೌತಡ್ಕ ಬಯಲು ಗಣಪನಿಗೆ ವಾರ್ಷಿಕ ಮೂಡಪ್ಪ ಸೇವೆಯ ಸಂಭ್ರಮ   

ಕೊಕ್ಕಡ: ಕೊಕ್ಕಡದ ಬಯಲು ಆಲಯ ಖ್ಯಾತಿಯ ಸೌತಡ್ಕ ಶ್ರೀ ಮಹಾಗಣಪತಿ  ಕ್ಷೇತ್ರದಲ್ಲಿ ಫೆ  2 ರಂದು  ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ  ಬೆಳಿಗ್ಗೆ  108 ತೆಂಗಿನಕಾಯಿ ಗಣಪತಿ ಹವನ, ರಾತ್ರಿ  ವಾರ್ಷಿಕ ಮೂಡಪ್ಪ ಸೇವೆ  ಸಂಭ್ರಮ, ಸಡಗದಿಂದ ನಡೆಯಿತು.                                                             

ಮದ್ಯಾಹ್ನ  ಮಹಾಪೂಜೆ, ಪಲ್ಲಪೂಜೆ ನಡೆದು  ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾದಿಗಳು  ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.   ಶ್ರೀ ಮಹಾಗಣಪತಿ ಸನ್ನಿಧಿಯನ್ನು   ವಿಶೇಷವಾಗಿ ರಂಗೋಲಿ ಹಾಗು  ಪುಷ್ಪಾಲಂಕಾರದಿಂದ  ಸುಂದರವಾಗಿ   ಶೃಂಗರಿಸಲಾಗಿತ್ತು.  ಮಹಾಗಣಪತಿ ಹಿಂಭಾಗದಲ್ಲಿ ಕಬ್ಬಿನ  ಅಟ್ಟಳಿಗೆಯಲ್ಲಿ ಅಪ್ಪ ಪ್ರಸಾದ  ಸುರಿದು  ಪೇರಿಸಿ  ಮಹಾರಂಗಪೂಜೆ ಹಾಗು  ಮೂಡಪ್ಪ ಸೇವೆಯ  ಮಹಾಮಂಗಳಾರತಿ  ನೆರವೇರಿಸಲಾಯಿತು.  ಊರ ಪರವೂರ ಸಹಸ್ರಾರು ಭಕ್ತಾದಿಗಳು  ಸಂಭ್ರಮದ   ಮೂಡಪ್ಪ ಸೇವೆಯ ವಾರ್ಷಿಕ ಉತ್ಸವಕ್ಕೆ ಸಾಕ್ಷಿಯಾಗಿದ್ದರು.  ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. 

ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಹಾಗು ತೊಡ್ತಿಲ್ಲಾಯ  ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.  ಚೆಂಡೆ,ವಾದ್ಯಮೇಳ  ಮತ್ತು ಸುಡುಮದ್ದು ಪ್ರದರ್ಶನ  ವಿಶೇಷ  ಆಕರ್ಷಣೆಯಾಗಿತ್ತು. .   

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ  ಉಪ್ಪಿನಂಗಡಿಯ  ವಾಮನ್ ನಾಯಕ್  ನೇತೃತ್ವದಲ್ಲಿ ಹಾಗು ವಿವಿಧ ಭಜನಾ  ತಂಡಗಳಿಂದ   ಭಜನಾ ಸೇವೆ, ಮಂಗಳೂರಿನ ಸುವರ್ಣ ನೃತ್ಯ ತಂಡದ ಸೇವಾರ್ಥ   ಭರತನಾಟ್ಯ,  ಸಂಜೆ ಶ್ರೀ ಕ್ಷೇತ್ರ ಸೌತಡ್ಕದ ಶಿಶುಮಂದಿರದ  ವಿದ್ಯಾರ್ಥಿಗಳಿಂದ ಚಿಣ್ಣರ ಚಿಲಿಪಿಲಿ ,  ಪುತ್ತೂರಿನ ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ  ಭಕ್ತಿ ಗೀತೆಗಳ ಗಾಯನ ,ರಾತ್ರಿ ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ “ತುಳು  ಪೌರಾಣಿಕ ಹಾಗು ಭಕ್ತಿ ಪ್ರದಾನ  ನಾ ಟಕ  ಪ್ರದರ್ಶಿಸಲ್ಪಟ್ಟಿತು .

  ಬೆಳ್ತಂಗಡಿ ತಹಸೀಲ್ದಾರು, ಕ್ಷೇತ್ರದ ಆಡಳಿತಾಧಿಕಾರಿ  ಪೃಥ್ವಿ ಸಾನಿಕಮ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವ್ಯವಸ್ಥಾಪನಾ ಸಮಿತಿಯ ಮಾಜಿ ಪದಾಧಿಕಾರಿಗಳು ,  ತಾಲೂಕಿನ  ಸಹಸ್ರಾರು ಭಕ್ತಾದಿಗಳು ಭಕ್ತಿ,ಶ್ರದ್ಧೆಯಿಂದ  ಭಾಗವಹಿಸಿದ್ದರು.

Related posts

ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya

ಅಂಡಿಂಜೆ: ನಾರಾವಿ ಮತ್ತು ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ 7 ಮಸೀದಿಗಳಿಗೆ ಮೃತದೇಹ ಸಂರಕ್ಷಣಾ ಫ್ರೀಝರ್ ಹಸ್ತಾಂತರ

Suddi Udaya

ಮಡಂತ್ಯಾರು: ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚರಂಡಿಗೆ ಜಾರಿದ ಕೆ ಎಸ್ ಆರ್ ಟಿ ಸಿ ಬಸ್ಸು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ನೂತನ ವರ್ಷಾಚರಣೆ

Suddi Udaya
error: Content is protected !!