20.5 C
ಪುತ್ತೂರು, ಬೆಳ್ತಂಗಡಿ
February 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ

ಬೆಳ್ತಂಗಡಿ: ಮೊಗ್ರು ಗ್ರಾಮ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರು ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಮನಗಂಡು ಶಾಲೆಯನ್ನು ಉನ್ನತೀಕರಿಸಿ, ಆಧುನಿಕ ಸೌಲಭ್ಯವನ್ನು ಒದಗಿಸುವ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್‌ನ್ನು ಸ್ಥಾಪನೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇಲ್ಲಿಗೆ ಶಾಲೆಯನ್ನು ಅಭಿವೃದ್ದಿ ಮಾಡುವ ಪ್ರಸ್ತಾವ ಸಲ್ಲಿಸಲಾಯಿತು. ಟ್ರಸ್ಟ್‌ನ ಮನವಿಯನ್ನು ಪುರಸ್ಕರಿಸಿ ಶಾಲಾ ದತ್ತು ಸ್ವೀಕಾರ ಅಧಿನಿಯಮದಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬೆಳ್ತಂಗಡಿ ಹಾಗೂ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಬೆಳ್ತಂಗಡಿ ನಡುವೆ ಜ.18 ರಂದು ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಕರಾರು ಒಪ್ಪಂದದಂತೆ ಮು.ಸ.ಸಾ.ಸೇ ಟ್ರಸ್ಟ್ 2025-2026 ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರೋತ್ಸಾಹಿಸುವುದರೊಂದಿಗೆ ಸರಕಾರದಿಂದ ಶಿಕ್ಷಣಕ್ಕೆ ಸಿಗುವ ಉಚಿತ ಸೌಲಭ್ಯವನ್ನು ಮಾಹಿತಿ ನೀಡುವುದರೊಂದಿಗೆ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ 2 ಆಂಗ್ಲ ಮಾಧ್ಯಮ ಭೋದನೆಗೆ 2 ಶಿಕ್ಷಕ/ಕಿಯರನ್ನು ನೇಮಿಸುವ ಆಧುನಿಕ ತಂತ್ರಜ್ಙಾನದ ಡಿಜಿಟಲ್ ಶಿಕ್ಷಣ ಸಾಮಾಗ್ರಿ ಒದಗಿಸುವುದು.

ಶಾಲಾ ವಾತಾವರಣದಲ್ಲಿ ಆಟದ ಸಾಮಾಗ್ರಿ ಒದಗಿಸುವುದು, ಶಾಲೆಗೆ ಬೇಕಾದ ಪಿಠೋಪಕರಣ ಹಾಗೂ ಶೈಕ್ಷಣಿಕ ಸಾಮಾಗ್ರಿ ಒದಗಿಸುವುದು, ಶಾಲಾ ಪರಿಸರದಲ್ಲಿ ತರಕಾರಿ ತೋಟ ಮಾಡುವುದುದರೊಂದಿಗೆ, ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲವಾಗುವಂತೆ ವಾಹಾನ ವ್ಯವಸ್ಥೆಯನ್ನು ಒದಗಿಸುವುದರೊಂದಿಗೆ, ಯೋಗ, ಕ್ರೀಡೆ, ಸಾಂಸ್ಕೃತಿಕ ತರಭೇತಿ ಇನ್ನೀತರ ಸೌಲಭ್ಯದೊಂದಿಗೆ ಟ್ರಸ್ಟ್ ಸ,ಕಿ,ಪ್ರಾ.ಶಾಲೆ ಮೊಗ್ರು ಇದರ ಸರ್ವಾಂಗಿನ ಅಭಿವೃದ್ದಿಗೆ ಕಾರ್ಯ ನಿರ್ವಹಿಸಬಹುದು ಎಂದು ಒಪ್ಪಂದ ಕರಾರಿನಲ್ಲಿ ಉಲ್ಲೇಖಿಸಲಾಯಿತ್ತು.

ಕರಾರು ಒಪ್ಪಂದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ ಇದರ ಬಿ.ಇ.ಒ ಶ್ರೀಮತಿ ತಾರಾಕೇಸರಿ ಕಛೇರಿ ವ್ಯವಸ್ಥಾಪಕ ನರೇಶ್ ನಾಯ್ಕ ಮು.ಸ.ಶಾ.ಸೇ.ಟ್ರಸ್ಟ್‌ನ ಅಧ್ಯಕ್ಷ ಕುಶಾಲಪ್ಪ ಗೌಡ ನೆಕ್ಕಾರಜೆ, ಜೊತೆ ಕಾರ್ಯದರ್ಶಿ ಉಮೇಶ ಗೌಡ ಪರಕ್ಕಜೆ ಉಪಸ್ಥಿತರಿದ್ದರು.

Related posts

ಕಳೆಂಜ: ಶಿಬರಾಜೆಯಲ್ಲಿ ಒಂಟಿಸಲಗ ದಾಳಿ : ಅಪಾರ ಕೃಷಿ ನಾಶ

Suddi Udaya

ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡೆ: ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಗೆ ಚಿನ್ನದ ಪದಕ

Suddi Udaya

ಅಂತರಾಷ್ಟ್ರೀಯ ಸೌತ್ ಏಷ್ಯಾ ಟಾರ್ಗೆಟ್ ಬಾಲ್ ಪಂದ್ಯಾಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ಸಿದ್ಧಾರ್ಥ್ ಎಂ. ಸಿ ಆಯ್ಕೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

Suddi Udaya

ಜೆಸಿ ಸಪ್ತಾಹಕ್ಕೆ 3 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಜೆಸಿಐ ಮಡಂತ್ಯಾರಿನಿಂದ ವರ್ಣರಂಜಿತ ಜೇಸಿ ಸಪ್ತಾಹ ‘ವಿಜಯ’-2024: ವಿವಿಧ ಕ್ಷೇತ್ರದ 15 ಸಾಧಕರಿಗೆ ಜೇಸಿ ಪುರಸ್ಕಾರ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಯಕ್ಷಗಾನ

Suddi Udaya

ವೇಣೂರು ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಉಪಾಧ್ಯಕ್ಷರಾಗಿ ಉಮೇಶ್ ಎನ್.

Suddi Udaya
error: Content is protected !!