September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ರತ್ನಮಾನಸ ವಸತಿ ನಿಲಯದ ಮಕ್ಕಳಿಗೆ ಭತ್ತದ ಸಸಿ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

ಉಜಿರೆ: ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ಜೂ.30 ರಂದು ಮಕ್ಕಳಿಗೆ ಭತ್ತದ ಸಸಿ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.

ನೀರಚಿಲುಮೆ ನಿನಾದದ ಶ್ರೀಮತಿ ಸೋನಿಯಾ ಯಶೋವರ್ಮ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ,
ಭತ್ತದಲ್ಲಿರುವ ಜೊಳ್ಳು ಮತ್ತು ಹೊಟ್ಟನ್ನು ಆರಿಸಿ ಭತ್ತವನ್ನು ತೆಗೆದಂತೆ, ವಿದ್ಯಾರ್ಥಿಗಳು ಒಳ್ಳೆಯ ಗುಣವನ್ನು ಅಳವಡಿಸಿ ಕೊಳ್ಳುವುದರೊಂದಿಗೆ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಕರೆಯಿತ್ತರು.

ನಿಲಯಪಾಲಕರಾದ ಯತೀಶ್ .ಕೆ ಬಳಂಜರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಭತ್ತ ನಾಟಿಯ ವಿವಿಧ ಮಜಲುಗಳನ್ನು ವಿಸ್ತಾರವಾಗಿ ವಿವರಿಸಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಿತ್ಯದ ದಿನಚರಿಯಲ್ಲಿ ಕೃಷಿಗೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ವಸತಿ ನಿಲಯದ ಅಧ್ಯಾಪಕರಾದ ರವಿಚಂದ್ರ ಧನ್ಯವಾದ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಿಬ್ಬಂಧಿಗಳಾದ ಉದಯರಾಜ್, ದೀಪಕ್ .ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭತ್ತದ ಬೀಜಗಳನ್ನು ಹಾಕಿ ಅನುಭವ ಪಡೆದುಕೊಂಡರು.

Related posts

ಮಲವಂತಿಗೆ: ಪಾಮಾಜಿ -ಕೊಲ್ಲಿ ರಸ್ತೆಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಉಜಿರೆಯಲ್ಲಿ ಜಿ-ಮಾಲ್ ಉದ್ಘಾಟನೆ: ಬೆಳೆಯುತ್ತಿರುವ ಉಜಿರೆಗೆ ಜಿ-ಮಾಲ್ ಶೋಭೆ ತಂದಿದೆ: ಶರತ್‌ಕೃಷ್ಣ ಪಡ್ವೆಟ್ನಾಯ

Suddi Udaya

ಚುನಾವಣೆ ಹಿನ್ನೆಲೆ: ಪೊಲೀಸ್ ಇಲಾಖೆಯಿಂದ ವಾಹನಗಳ ವಿಶೇಷ ತಪಾಸಣೆ

Suddi Udaya

46 ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳ ನೇಮಕ

Suddi Udaya

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ

Suddi Udaya
error: Content is protected !!