April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

ಕಲ್ಮಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ,ಪಜಿರಡ್ಕದಲ್ಲಿ ಮಂಗಳವಾರ ರಾತ್ರಿ ಜಾತ್ರೋತ್ಸವದ ಅಂಗವಾಗಿ ಪುಷ್ಪರಥೋತ್ಸವ ಜರಗಿತು.


ದಾನಿಗಳು ನೀಡಿದ ನೂತನ ಪುಷ್ಪರಥ ಸಮರ್ಪಣೆ ನಡೆದು 102 ವರ್ಷಗಳ ಬಳಿಕ ದೇವಸ್ಥಾನದಲ್ಲಿ ಜಾತ್ರೆಯ ಸಮಯ ರಥೋತ್ಸವ ಜರಗಿತು.
ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ರಾಜೇಶ್ ಹೊಳ್ಳ ಸಹಕಾರದಲ್ಲಿ ವೇದಮೂರ್ತಿ ವೆಂಕಟರಾಜ ಹೆಬ್ಬಾರ್ ದೇವರ ಬಲಿ, ಉತ್ಸವ, ಪಾಲಕ್ಕಿ ಬಲಿ, ಕಟ್ಟೆ ಪೂಜೆ, ವಸಂತ ಕಟ್ಟೆ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
15 ಕಿಂತ ಅಧಿಕ ಭಜನಾ ತಂಡಗಳಿಂದ ದೇವಸ್ಥಾನದ ಹೊರಾಂಗಣದಲ್ಲಿ ಭಜನೆ ಕಾರ್ಯಕ್ರಮ ,ಅಷ್ಟ ಸೇವೆ ಜರಗಿತು.


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವದಾಸ್ ಕಾಪಿಕಾಡ್ ತಂಡದವರಿಂದ ತುಳು ನಾಟಕ ಪ್ರದರ್ಶನಗೊಂಡಿತು.


-ಅಭಿನಂದನೆ ಕಾರ್ಯಕ್ರಮ-
ಸುಮಾರು 8:50 ಲಕ್ಷ ರೂ. ವೆಚ್ಚದ ನೂತನ ಪುಷ್ಪರಥವನ್ನು ದೇವಸ್ಥಾನಕ್ಕೆ ನೀಡಿದ ದಾನಿಗಳಾದ ಸುಕನ್ಯಾ ಮತ್ತು ಜಯರಾಮ್ ರಾವ್ ಹಾಗೂ ಮಕ್ಕಳನ್ನು ಶೋಭಾ ಯಾತ್ರೆ, ಜಾತ್ರೆಯ ಕಾರ್ಯಕ್ರಮಗಳಿಗೆ ಸಹಕರಿಸಿದವರನ್ನು ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು.
ಆಡಳಿತಾಧಿಕಾರಿ ನಾಗಶಯನ ರಾವ್ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ್ ಕುಮಾರ್, ತುಕಾರಾಂ ಸಾಲಿಯಾನ್, ಕೃಷ್ಣಪ್ಪ ಗುಡಿಗಾರ್, ನ್ಯಾಯವಾದಿ ಗಣೇಶ ಗೌಡ ,ಬಾಲಚಂದ್ರ ರಾವ್, ವೆಂಕಟರಮಣ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Related posts

ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವರ್ಷವೊಂದರಲ್ಲೇ 193 ಕೆರೆಗಳ ಪುನಶ್ಚೇತನ : ಬರಗೆಲ್ಲುವುದಕ್ಕೆ ಕೆರೆ ಮಾದರಿ

Suddi Udaya

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಾಂಸ್ಥಿಕ ತರಬೇತಿ ಕಾರ್ಯಕ್ರಮ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಶೇ. 97.29 ಫಲಿತಾಂಶ

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya
error: Content is protected !!