37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆರಂಬೋಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

ಆರಂಬೋಡಿ: ಆರಂಬೋಡಿ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ರವರ ಅಧ್ಯಕ್ಷತೆಯಲ್ಲಿ ಫೆ.6 ರಂದು ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿ. ಎನ್ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದಿನೇಶ್, ಹರಿಯಪ್ಪ, ಭೋಜ, ಕೃಷ್ಣಪ್ಪ, ರತ್ನಾಕರ, ಸುಕೇಶ್ ರವರನ್ನು ಗೌರವಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತೇಜಸ್ವಿನಿ, ಪಂಚಾಯತ್‌ ಸದಸ್ಯರುಗಳಾದ, ಹೆಚ್ ಪ್ರಭಾಕರ, ಶ್ರೀಮತಿ ವಿಜಯ, ಎಂ ರಮೇಶ್, ಸತೀಶ ಪೂಜಾರಿ, ಸುರೇಂದ್ರ ಶೆಟ್ಟಿ, ಶ್ರೀಮತಿ ಗೀತಾ, ಶ್ರೀಮತಿ ಮೋಹಿನಿ, ಶ್ರೀಮತಿ ಲೀಲಾ, ಸುದರ್ಶನ್ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ| ಸ್ಮೃತಿ ಯು. ಸ್ವಾಗತಿಸಿ, ಅನುಪಾಲನ ವರದಿ ವಾಚಿಸಿದರು. ಪದ್ಮನಾಭ ನಿರೂಪಿಸಿ, ಸಿಬ್ಬಂದಿಗಳು ಸಹಕರಿಸಿದರು. ಗ್ರಾ.ಪಂ. ಸದಸ್ಯೆ ಕು. ದೀಕ್ಷಿತಾ ವಂದಿಸಿದರು.

Related posts

ಧರ್ಮಸ್ಥಳ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಪೃಥ್ವಿ ಜುವೆಲ್ಸ್ ವತಿಯಿಂದ ಭಾರತೀಯ ಸೇನೆಗೆ ನೇಮಕಗೊಂಡಿರುವ ಮನೋಹರ್ ಪೂಜಾರಿಯವರಿಗೆ ಗೌರವಾರ್ಪಣೆ

Suddi Udaya

ಯುಟ್ಯೂಬರ್ ಸಮೀರ್ ಎಂಡಿ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಎ.30: ವಾಣಿ ಕಾಲೇಜು ಪ್ರಾಂಶುಪಾಲ ಡಿ. ಯದುಪತಿ ಗೌಡ ಸೇವಾ ನಿವೃತ್ತಿ

Suddi Udaya

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಗರ್ಡಾಡಿಯ ಅತುಲ್ ಕೃಷ್ಣ ರಿಗೆ ಸನ್ಮಾನ

Suddi Udaya

ಮಡಂತ್ಯಾರು ಗ್ರಾ.ಪಂ ಪಾರೆಂಕಿ 1 ನೇ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಡೆ

Suddi Udaya
error: Content is protected !!