23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಪಡಂಗಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ವಸಂತ ಪೂಜಾರಿ ರವರ ಅಧ್ಯಕ್ಷತೆಯಲ್ಲಿ ಫೆ.7ರಂದು ಪಂಚಾಯತ್ ವಠಾರದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವ ರುದ್ರಪ್ಪ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಸಂತಿ, ಪಂಚಾಯತ್‌ ಸದಸ್ಯರುಗಳಾದ ಸಂತೋಷ್ ಕುಮಾರ್ ಜೈನ್, ರಿಚಾರ್ಡ್ ಗೋವಿಯಸ್, ಹಾಮದ್ ಬಾವ, ಅಶೋಕ್ ಸಪಲ್ಯ, ಶ್ರೀಮತಿ ಮೀನಾಕ್ಷಿ, ಯೋಗೀಶ್ ಕುಮಾರ್ ಡಿ.ಪಿ, ಕೃಷ್ಣಪ್ಪ, ಹರೀಶ್ ಕುಮಾರ್, ಶ್ರೀಮತಿ ವಿನೋದ, ಕು. ಶಕುಂತಲಳ, ಶ್ರೀಮತಿ ಗಾಯತ್ರಿ, ಶ್ರೀಮತಿ ವನಜಾಕ್ಷಿ, ಶ್ರೀಮತಿ ಕವಿತಾ, ಶ್ರೀಮತಿ ಸುಮತಿ ಪಿ, ಶ್ರೀಮತಿ ಶುಭ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಫನಾ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಅನುಪಾಲನ ವರದಿ, ಸಿಬ್ಬಂದಿ ಸುನಿಲ್ ವಾರ್ಡ್ ಸಭೆಯ ಪ್ರಸ್ತಾವನೆಗಳನ್ನು ವಾಚಿಸಿದರು.

Related posts

ಅಳದಂಗಡಿಯಲ್ಲಿ ಸಂಭ್ರಮದ ಪಟ್ಟದ ಕಂಬಳ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗಣಪತಿ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ನಾವೂರು ಗ್ರಾಮ ಸಮಿತಿಯಿಂದ ಸಿಎಂ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಬೆಳ್ತಂಗಡಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಹುಟ್ಟುಹಬ್ಬದ ಅಂಗವಾಗಿ ಶ್ರೀರಾಘವೇಂದ್ರ ಮಠದ ಸುಂದರ ಪರಿಸರದಲ್ಲಿ “ಪ್ರೇಮ ತರು” ಸಸಿಗಳನ್ನು ನೆಡುವ ಕಾರ್ಯಕ್ರಮ

Suddi Udaya

ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಭಾಟನೆ

Suddi Udaya

ಮೊಗ್ರು: ಕೋರಿಯಾರು ಎಂಬಲ್ಲಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!