ಬೆಳ್ತಂಗಡಿ: ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಅಥವಾ ಇತರ ಸಿಬ್ಬಂದಿಗಳು ಇರುವುದು ಸಾಮಾನ್ಯ ಆದರೆ ಇಂದಬೆಟ್ಟು ಪ್ರಾಥಮಿಕ ಆಸ್ಪತ್ರೆಯಲ್ಲಿ ಫೆ.8ರಂದು ಸಂಜೆ 5.30ರಿಂದ ಯಾರೂ ಇಲ್ಲದೆ, ಬಾಗಿಲನ್ನು ಹಾಕದೆ ಸಿಬ್ಬಂದಿಗಳು ಹೋಗಿರುವುದು ಕಂಡು ಬಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 7 ಗಂಟೆ ತನಕ ಆಸ್ಪತ್ರೆಗಳು ಓಪನ್ ಆಗಿರುತ್ತದೆ. ಅಗತ್ಯವಿದ್ದವರು ಜೌಷಧಿಗಾಗಿ ಬರುತ್ತಿರುತ್ತಾರೆ. ನಂತರ ಹೆಚ್ಚಿನ ಕಡೆ ಬಾಗಿಲು ಹಾಕಿ ಸಿಬ್ಬಂದಿಗಳು ತೆರಳುತ್ತಾರೆ. ಆದರೆ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಸಂಜೆ 5.30ಕ್ಕೆ ಸ್ಥಳೀಯರು ಹೋಗಿದ್ದು, ಅವರಿಗೆ ಅಚ್ಚರಿ ಕಾದಿತ್ತು. ಆಸ್ಪತ್ರೆ ಓಪನ್ ಆಗಿತ್ತು. ಆದರೆ ಒಳಗೆ ಯಾರೂ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಸಿಬ್ಬಂದಿಗಳು ಯಾರು ಇಲ್ಲದೆ ಸ್ಥಳೀಯರು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಲು ಮೊಬೈಲ್ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ಆಸ್ಪತ್ರೆಗೆ ಬಾಗಿಲನ್ನು ಹಾಕದೆ ಹೋಗಿರುವುದು ಸ್ಥಳೀಯರಿಗೆ ಆಶ್ಚರ್ಯವನ್ನು ತಂದಿದೆ.