April 21, 2025
Uncategorized

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ 2000ಕ್ಕೂ ಮಿಕ್ಕಿ ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ಕೃಷಿಯ ಕಟಾವು ಕಾರ್ಯಕ್ರಮ

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ ಇವರ ನೇತೃತ್ವದಲ್ಲಿ ಶ್ರೀ ಧ.ಮಂ.ಕಾಲೇಜು (ಸ್ವಾಯತ್ತ), ಶ್ರೀ ಧ.ಮಂ.ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಉಜಿರೆ, ಶ್ರೀ ಧ.ಮಂ. ಸ್ಟೋಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ವ್ಯವಸ್ಥಾಪನಾ ಸಮಿತಿ ಅನಂತಪದ್ಮನಾಭ ದೇವಸ್ಥಾನ, ಅನಂತೋಡಿ, ಬೆಳಾಲು ಇದರ ಸಹಯೋಗದಲ್ಲಿ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ವಠಾರದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ ಸುಮಾರು 2000ಕ್ಕೂ ಮಿಕ್ಕಿ ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ಕೃಷಿಯ ಕಟಾವು ಕಾರ್ಯಕ್ರಮ ಫೆ.9 ರಂದು ನಡೆಯಿತು.

ಕಾರ್ಯಕ್ರಮವನ್ನು ಸೋನಿಯ ಯಶೋವರ್ಮ ಉದ್ಟಾಟಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಎಸ್ ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್, ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ ಕುಮಾರ್ ಹೆಗ್ಡೆ, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಪೂರನ್‌ವರ್ಮ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ದುರ್ಗಾ ಪ್ರಸಾದ್, ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಉಪನ್ಯಾಸಕ ಮಹೇಶ್ ಶೆಟ್ಟಿ, ಕ್ರೀಡಾ ಇಲಾಖೆಯ ಪ್ರತಾಪ್ ಲಿಂಗಯ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬದುಕು ಕಟ್ಟೋಣ ಸಂಘದ ಸಂಚಾಲಕರಾದ ಮೋಹನ್ ಕುಮಾರ್, ರಾಜೇಶ್ ಪೈ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಸಾವಿರಕ್ಕೂ ಅಧಿಕ ಯುವಜನತೆ ಭಾಗವಹಿಸಿದರು.

ಧನಂಜಯ ಕುಮಾರು ಸ್ವಾಗತಿಸಿ. ತಿಮ್ಮಯ್ಯ ನಿರೂಪಿಸಿದರು.

Related posts

ರಾಷ್ಟ್ರಮಟ್ಟದ ವಾಲಿಬಾಲ್: ಮುಂಡಾಜೆ ಕಾಲೇಜಿನ ಇಂದುಮತಿ ತಳವಾರ್ ಹಾಗೂ ಅಂಜಲಿಗೆ ಚಿನ್ನದ ಪದಕ

Suddi Udaya

ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya

ಪಟ್ರಮೆ: ಪಾದೆ ನಿವಾಸಿ ಶ್ರೀಮತಿ ಪುಷ್ಪವತಿ ನಿಧನ

Suddi Udaya

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ಗುರುವಾಯನಕೆರೆ 30 ನೇ ವರ್ಷದ ಸಾರ್ವಜನಿಕ‌ ಶ್ರೀ ಗಣೇಶೋತ್ಸವ: ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿಯವರಿಂದ ಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಲ್ಲಿ ಕೋಳಿ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆ

Suddi Udaya
error: Content is protected !!