17.6 C
ಪುತ್ತೂರು, ಬೆಳ್ತಂಗಡಿ
February 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ),ಕರ್ನಾಟಕ ನೇತ್ರಾವತಿ ವಲಯ ಪುತ್ತೂರು ತಾಲೂಕು ಹಾಗೂ ಕ್ಷೀರಸಂಗಮ ಹಾಲು ಉತ್ಪಾದಕರ ಸಹಕಾರಿ ಸಂಘ ಸಭಾಭವನ ಕಳಿಯ ಗೇರುಕಟ್ಟೆ ಇದರ ಸಹಯೋಗದಲ್ಲಿ ಆರೋಗ್ಯ ಪೂರ್ಣ ಜೀವನಕ್ಕಾಗಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯು ಫೆ. 9 ರಂದು ಉದ್ಘಾಟನೆಗೊಂಡಿತು.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಹಾಗೂ ಕ್ಷೀರಸಂಗಮ ಸಭಾಭವನದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ದೀಪ ಬೆಳಗಿಸುವುದರೊಂದಿಗೆ ತರಗತಿಯನ್ನು ಉದ್ಘಾಟಿಸಿದರು. ಎಸ್ ಪಿ ವೈ ಎಸ್ ಎಸ್ ನ ಪುತ್ತೂರು ತಾಲೂಕಿನ ವರದಿ ಪ್ರಮುಖರಾದ ಲಕ್ಷ್ಮಿಕಾಂತ್ ಅಧ್ಯಕ್ಷತೆಯನ್ನು ವಹಿಸಿ ,ನಮ್ಮ ಜೀವನದಲ್ಲಿ ಯೋಗದ ಅಗತ್ಯದ ಬಗ್ಗೆ ತಿಳಿಸುತ್ತಾ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಕ್ಷ್ಮೀನಾರಾಯಣ ,ಪ್ರಾಂತ ಶಿಕ್ಷಣ ಪ್ರಮುಖರು, ಕೇಂದ್ರ ಸಮಿತಿ ತುಮಕೂರು ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸ್ಥಾಪನೆ, ಬೆಳೆದು ಬಂದ ಹಾದಿ ಹಾಗೂ ಧ್ಯೇಯೋದ್ದೇಶಗಳ ಪರಿಚಯ ಮಾಡಿ ಹೊಸ ಯೋಗ ಬಂಧುಗಳಿಗೆ ಶುಭ ಹಾರೈಸಿದರು.

ಕುಮಾರಿ ಬ್ರಾಹ್ಮಿ ಪ್ರಾರ್ಥಿಸಿದರು. ಸುಕೇಶ್ ಗೇರುಕಟ್ಟೆ ಸ್ವಾಗತಿಸಿ, ತಿಲಕ್ ಗುರುವಾಯನಕೆರೆ ವಂದಿಸಿದರು. ಶಶಿಕಲಾ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿನಿತ್ಯ ಯೋಗ ತರಗತಿಯು ಮುಂಜಾನೆ 5:00ರಿಂದ 6:30ವರೆಗೆ ನಡೆಯಲಿದ್ದು ಸ್ಥಳೀಯರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಯೋಗ ಶಿಕ್ಷಕಿ ಶ್ರೀಮತಿ ಪ್ರೇಮಲತಾ ತಿಳಿಸಿದರು.

Related posts

ನ.9: ನಾಳ-ಗೇರುಕಟ್ಟೆ ಯಕ್ಷಾರಾಧನಾ ಕಲಾ ಪ್ರತಿಷ್ಠಾನ ಸಹಯೋಗದೊಂದಿಗೆ “ಯಕ್ಷೋತ್ಸವ”

Suddi Udaya

ದ.ಕ‌ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರ ಭೇಟಿ: ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಕೆ

Suddi Udaya

ಉಜಿರೆ ಟಿಬಿ ಕ್ರಾಸ್ ಬಳಿ ಸ್ಮಾರ್ಟ್ ಎಂಟರ್ಪ್ರೈಸಸ್ ಶುಭಾರಂಭ

Suddi Udaya

ಸೌಜನ್ಯ ಹೋರಾಟದ ನೆಪದಲ್ಲಿ ತೇಜೋವಧೆ ಸರಿಯಲ್ಲ : ಭಾಸ್ಕರ್ ಧರ್ಮಸ್ಥಳ

Suddi Udaya

ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿಯಾಗಿ ಅನುಜ್ಞ ಕಲಶ ಮತ್ತು ಸಂಕೋಚ ವಿಧಿ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!