ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ “ನೊಚ್ಚ ಸೆರಾಮಿಕ್ಸ್” ಪ್ರಾರಂಭೋತ್ಸವ: ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ

ಅಳದಂಗಡಿ: ಬೆಳೆಯುತ್ತಿರುವ ಅಳದಂಗಡಿ ಪ್ರದೇಶದಲ್ಲಿ ದಿನನಿತ್ಯ ವ್ಯಾಪರ ವಹಿವಾಟು ಬಹಳ ಜೋರಾಗಿ ನಡೆಯುತ್ತಿದೆ. ಕೆಲವೇ ಕೆಲವು ಅಂಗಡಿ ಮುಂಗಟ್ಟುಗಳಿದ್ದ ಅಳದಂಗಡಿಯಲ್ಲಿ ಇದೀಗ ನೂರಾರು ವಿವಿಧ ಮಾದರಿಯ ಅಂಗಡಿಗಳು ಪ್ರಾರಂಭಗೊಂಡು ಪೇಟೆಯು ವೇಗವಾಗಿ ಬೆಳೆಯುತ್ತಿದೆ.

ಪ್ರತೀಕ್ ಶೆಟ್ಟಿ ನೊಚ್ಚ ಇವರ ಮಾಲಕತ್ವದ “ನೊಚ್ಚ ಸೆರಾಮಿಕ್ಸ್” (ಪ್ರತಿಷ್ಟಿತ ಓರಿಯೆಂಟ್ ಬೆಲ್ ಟೈಲ್ಸ್‌ ನ ಅಧಿಕೃತ ಮಾರಾಟಗಾರರು) ಇದರ ಶುಭಾರಂಭವು ಅಳದಂಗಡಿ ಶ್ರೀ ಲಕ್ಷ್ಮೀ ಕಟ್ಟಡದಲ್ಲಿ ಜು.14 ರಂದು ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೇರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಅಳದಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಪ್ರಗತಿಪರ ಕೃಷಿಕ ಎಮ್.ಗಂಗಾಧರ ಮಿತ್ತಮಾರ್,ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳಪುಳೆ, ಕಟ್ಟಡ ಮಾಲೀಕರಾದ ಡಾ.ಪ್ರಶಾಂತ್ ದೇವಾಡಿಗ, ಓರಿಯೆಂಟ್ ಬೆಲ್ ಟೈಲ್ಸ್ ಶಾಖಾ ಮುಖ್ಯಸ್ಥರಾದ ಶರೀಫ್ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಸಂಜೀವ ಪೂಜಾರಿ ಕೊಡಂಗೆ, ರಬ್ಬರ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ,ವಕೀಲರಾದ ಸಜಿತ್ ಕುಮಾರ್ ಜೈನ್,ಉದ್ಯಮಿ ಪುಷ್ಪರಾಜ್ ಶೆಟ್ಟಿ, ಸುಲ್ಕೇರಿ ಶ್ರೀರಾಮ ಶಾಲೆಯ ಮುಖ್ಯಸ್ಥರಾದ ರಾಜು, ಪ್ರಮುಖರಾದ ಶುಭಾಶ್ಚಂದ್ರ ರೈ ಪಡ್ಯೋಡಿ, ಚಂದ್ರಹಾಸ್ ಎಸ್.ಸಿ ಡಿ.ಸಿ‌.ಸಿ ಬ್ಯಾಂಕ್,ನವೀನ್ ಕೆ ಸಾಮಾನಿ ಕರಂಬಾರು, ಹೆಚ್.ಎಲ್ ರಾವ್,ಸಂಜೀವ ಶೆಟ್ಟಿ ಕುಂಠಿನಿ, ಜಯಂತ್ ಶೆಟ್ಟಿ ಕುಂಠಿನಿ, ಲ.ದೇವದಾಸ್ ಶೆಟ್ಟಿ ಹಿಬರೋಡಿ, ಕಿರಣ್ ಕುಮಾರ್ ಶೆಟ್ಟಿ ಗುರುವಾಯನಕೆರೆ, ನಿತ್ಯಾನಂದ ಎನ್ ನಾವರ, ವಿಜಯ್ ಕುಮಾರ್ ಜೈನ್, ಪ್ರದೀಪ್ ಶೆಟ್ಟಿ ಪಿಲ್ಯ,ಪ್ರಶಾಂತ್ ಶೆಟ್ಟಿ ಅಳದಂಗಡಿ, ಜಗನ್ನಾಥ ಶೆಟ್ಟಿ ಅಳದಂಗಡಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಶುಭ ಕೋರಿದರು.

ಶ್ರೀಮತಿ ಮತ್ತು ನಿತ್ಯಾನಂದ ಶೆಟ್ಟಿ,ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಸಹೋದರರು, ಸಹೋದರಿಯರು ಮತ್ತು ಮಾಲಕ ಪ್ರತೀಕ್ ಶೆಟ್ಟಿ ನೊಚ್ಚ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಅಳದಂಗಡಿ: ಆಮಂತ್ರಣ ಉಯ್ಯಾಲೆ ಸೇವಾ ವಿಭಾಗದ ಉದ್ಘಾಟನೆ

Suddi Udaya

ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದುರು ನಿದ್ದೆ ಮಾಡುವ ಮೂಲಕ ಆಕ್ರೋಶ

Suddi Udaya

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರ ಡ್ರಾಗನ್ ಕೃಷಿ ತೋಟಕ್ಕೆ ವಿಜ್ಞಾನಿ ತಂಡ ಭೇಟಿ

Suddi Udaya

ಜೂನಿಯರ್ ಅಥ್ಲೆಟಿಕ್ಸ್ ರಿಲೇ ರೇಸ್: ಕಲ್ಲೇರಿಯ ಯತಿನ್ ನಾಯ್ಕ್ ರಿಗೆ ಚಿನ್ನದ ಪದಕ

Suddi Udaya

ತೋಟತ್ತಾಡಿ: ದೊರ್ತಾಡಿ ನಿವಾಸಿ ಶಿವಣ್ಣ ಕುಂಬಾರ ನಿಧನ

Suddi Udaya

ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿ ಸಂಬಂಧಿಸಿದ ನಾಗಬನದಲ್ಲಿ ವಿಶೇಷ ಪೂಜೆ

Suddi Udaya
error: Content is protected !!