ಬಳಂಜ: ಸರಕಾರಿ ಉನ್ನತಿಕರೀಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಡೆ ಶಾಲೆ ಬಳಂಜ ಇದರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಚಂದ್ರಮ ಆಯ್ಕೆಯಾದರು.
ಬಳಂಜ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹರೀಶ್ ಅವರನ್ನು ಆಯ್ಕೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ, ಶಿಕ್ಷಣ ಟ್ರಸ್ಟ್ ಪ್ರ.ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟಿ ರಾಕೇಶ್ ಹೆಗ್ಡೆ ಬಳಂಜ ಹಾಗೂ ಹಳೆ ವಿದ್ಯಾರ್ಥಿಗಳಾದ ದಿನೇಶ್ ಪಿಕೆ, ರವೀಂದ್ರ ಬಿ ಅಮೀನ್, ಸತೀಶ್ ಕೆ, ಸುರೇಶ್ ಪೂಜಾರಿ ಹೇವ, ಅಶ್ವಿನ್ ಬಿ.ಕೆ, ಹರೀಶ್ ಶೆಟ್ಟಿ ಬರಮೇಲು, ಪುರಂದರ ಪೆರಾಜೆ, ಸತೀಶ್ ದೇವಾಡಿಗ ಹಾಗೂ ಹಳೆ ವಿದ್ಯಾರ್ಥಿಗಳು ಹಾಜರಿದ್ದರು.