April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಹೊಸ ಬೆಳಕು ಒಕ್ಕೂಟ ಹಾಗೂ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿ

ಬೆಳ್ತಂಗಡಿ : ಹೊಸ ಬೆಳಕು ಒಕ್ಕೂಟ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 45 ಸದಸ್ಯರಿಗೆ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿಯನ್ನು ಫೆ.09ರಂದು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಹೊಸ ಬೆಳಕು ಒಕ್ಕೂಟದ ಗೌರವಾಧ್ಯಕ್ಷ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ ಕೃಷಿ ಬೆಳೆಯಲ್ಲಿ ಅನೇಕ ಮಿಶ್ರ ಕೃಷಿಯನ್ನು ಮಾಡಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಅಡಿಕೆ ಬೆಳೆ ರೋಗಗಳಿಂದ ನಶಿಸುವ ಈ ಸಂದರ್ಭದಲ್ಲಿ ಪರ್ಯಾಯ ಕೃಷಿಯನ್ನು ಮಾಡಿ ಲಾಭಾಂಶ ಮಾಡಿ ಉತ್ತಮ ಜೀವನ ಮಾಡಬಹುದು ಎಂದರು. ಹಾಗಾಗಿ ಇಂದಿನ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿ ನಿಮಗೆ ಉಪಯುಕ್ತವಾಗಲಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಸುಲೇಮಾನ್ ಬೆಳಾಲು ಅವರು, ಅಣಬೆ ಕೃಷಿ ಮಾಡುವಬಗ್ಗೆ ಪಾತ್ರ್ಯಕ್ಷತೆ ತೋರಿಸಿ ಅಣಬೆ ಕೃಷಿಯ ಉತ್ತಮ ತರಬೇತಿಯನ್ನು ನೀಡಿದರು.


ಮುಖ್ಯ ಅತಿಥಿಗಳಾಗಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯ ವಂದನೀಯ ಫಾ| ಕ್ಲಿಫರ್ಡ್ ಪಿಂಟೋ ರವರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್ ಹಾಗೂ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ ಒಕ್ಕೂಟ ಅಧ್ಯಕ್ಷ ವಿನ್ಸೆಂಟ್ ಲೋಬೋ, ಕಾರ್ಯದರ್ಶಿ ಪೌಲಿನ್ ರೇಗೊ ಉಪಸ್ಥಿತರಿದ್ದರು.

ಪ್ರಭಾಕರ್ ಮಲ್ಯ ಮಲ್ಲಿಗೆ ಕೃಷಿ ಹೇಗೆ ಮಾಡಬೇಕು, ಅದರಿಂದ ಹೇಗೆ ಲಾಭ ಪಡೆಯುವುದು ಇದರ ಬಗ್ಗೆ ಮಾಹಿತಿ ನೀಡಿದರು. ನಂತರ ಜಿಲ್ಲಾ ಕೃಷಿ ಕೇಂದ್ರದ ಅಧಿಕಾರಿ ಗಣೇಶ್ ಭಟ್ಟ ಕೃಷಿ ತರಬೇತಿ ಕೇಂದ್ರದಿಂದ ಅನೇಕ ಜನರಿಗೆ ಅನೇಕ ಕೃಷಿ ತರಬೇತಿಗಳನ್ನು ಕೊಟ್ಟು ಅದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಮಾರ್ಗದರ್ಶನವನ್ನು ನೀಡಿದರು.


ವಾಲ್ಟರ್ ಮೋನಿಸ್ ಕಾರ್ಯಕ್ರಮ ನಿರೂಪಿಸಿ , ಒಕ್ಕೂಟ ಅಧ್ಯಕ್ಷ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ಒಕ್ಕೂಟ ಕಾರ್ಯದರ್ಶಿ ಶ್ರೀಮತಿ ಪೌಲಿನ್ ರೇಗೊ ಧನ್ಯವಾದವಿತ್ತರು.

Related posts

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ಉಜಿರೆ ವಲಯದ ಮಾಚಾರು ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಕುಕ್ಕೇಡಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ಪ್ರಕರಣ: ಮಾಲಕ ಸೈಯ್ಯದ್ ಬಶೀರ್ ಪೊಲೀಸ್ ವಶ

Suddi Udaya

ಗರ್ಡಾಡಿ: ಜೀಪು ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಉಜಿರೆಯ ಪ್ರತೀಕ್ ಶೆಟ್ಟಿ ರಿಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya
error: Content is protected !!